10,16, 2017, ಸ್ಯಾಂಡಲ್‍ವುಡ್‍ಗೆ ಮದುವೆ ವರ್ಷಗಳೆಂದೇ ಹೇಳಬೇಕು. ಯಶ್, ರಾಧಿಕಾ, ಪ್ರಿಯಾಮಣಿ, ಅಮೂಲ್ಯ, ಮೇಘನಾ ರಾಜ್, ಚಿರಂಜೀವಿ ಸರ್ಜಾ, ರಮ್ಯಾ ಬಾರ್ನಾ, ಸಿಂಧು ಲೋಕನಾಥ್... ಹೀಗೆ ವರ್ಷವಿಡೀ ಮದುವೆ, ಎಂಗೇಜ್‍ಮೆಂಟ್‍ಗಳು ಸುದ್ದಿಯಗುತ್ತಲೇ ಇವೆ. ಈಗ ದಿಗಂತ್ ಮತ್ತು ಐಂದ್ರಿತಾ ಸರದಿ.
ದಿಗಂತ್ ಮತ್ತು ಐಂದ್ರಿತ ನಡುವೆ ಪ್ರೀತಿ ಇದೆ ಅನ್ನೋದು ಹೊಸ ಸುದ್ದಿಯೇನಲ್ಲ. ಕೆಲವೊಮ್ಮೆ ನಿರಾಕರಿಸುವ ಮತ್ತೂ ಕೆಲವೊಮ್ಮೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುವ ಇಬ್ಬರೂ ಅಧಿಕೃತ ಕುತೂಹಲವನ್ನು ಕಾದಿಟ್ಟುಕೊಂಡೇ ಬಂದಿದ್ದಾರೆ. ಹೀಗಿರುವಾಗಲೇ ಈ ಸುದ್ದಿ ಹೊರಬಿದ್ದಿದೆ.
ಮುಂದಿನ ವರ್ಷ ಇಬ್ಬರೂ ಮದುವೆಯಾಗಲಿದ್ದಾರಂತೆ. ಬ್ರೇಕಪ್ ಏನೂ ಆಗಿಲ್ಲ. ಮದುವೆಯಾಗೋದು ನಿಜ. ಆದರೆ, ಈಗಲ್ಲ. ಮುಂದಿನ ವರ್ಷದ ಕೊನೆಯಲ್ಲಿ ಮದುವೆಯಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ ದಿಗಂತ್. ಇಬ್ಬರೂ ಮನಸಾರೆ, ಪಾರಿಜಾತ, ಶಾರ್ಪ್ ಶೂಟರ್ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದವರು. ಮದುವೆಯಾಗುವುದಾದರೆ, ಕಂಗ್ರಾಟ್ಸ್ ಹೇಳೋಣ.