` ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಟಗರು ಟೀಸರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tagaru teaser launch by fans and for fans
Shivarajkumar In Tagaru

ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಶೇ.80ರಷ್ಟು ಶೂಟಿಂಗ್ ಮುಗಿದಿದ್ದು, ಟೀಸರ್ ರೆಡಿಯಾಗುತ್ತಿದೆ. ಚಿತ್ರದ ಟೀಸರ್‍ನ್ನು ಶಿವರಾಜ್ ಕುಮಾರ್ ಆಭಿಮಾನಿಗಳಿಂದಲೇ ಬಿಡುಗಡೆ ಮಾಡಿಸುವ ಯೋಜನೆ ಸಿದ್ಧವಾಗಿದೆ.

ಶಿವು ಅಡ್ಡ ಮತ್ತು ರಾಜ್ ಡೈನಾಸ್ಟಿ ಸಂಘಗಳು ನವೆಂಬರ್ 7ರಂದು ಟೌನ್‍ಹಾಲ್‍ನಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿವೆ. ಆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮತ್ತು ಸೂರಿ ಜೊತೆ ಪುನೀತ್ ರಾಜ್‍ಕುಮಾರ್ ಕೂಡಾ ಇರಲಿದ್ದಾರೆ.

ಶ್ರೀಕಾಂತ್ ನಿರ್ಮಾಣದ ಚಿತ್ರ ಬಹುತೇಕ ಡಿಸೆಂಬರ್‍ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ. ಜಾಕಿ ಭಾವನಾ ನಾಯಕಿಯಾಗಿರುವ ಚಿತ್ರದಲ್ಲಿ ಕೆಂಡಸಂಪಿಗೆ ಮಾನ್ವಿತಾ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಡೈನಮಿಕ್ ಸ್ಟಾರ್ ದೇವರಾಜ್‍ಗೆ ವಿಶೇಷ ಪಾತ್ರವಿದೆ. ವಿಲನ್ ಆಗಿ ನಟಿಸುತ್ತಿರುವುದು ಹೀರೋ ಆಗಿದ್ದ ಧನಂಜಯ್ ಹಾಗೂ ರಾಜಾಹುಲಿ ಖ್ಯಾತಿಯ ವಸಿಷ್ಠ ಸಿಂಹ. ಚಿತ್ರಕ್ಕೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಚರಣ್‍ರಾಜ್ ಸಂಗೀತ ನಿರ್ದೇಶನವಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಚಿತ್ರೀಕರಣಗೊಂಡಿರುವ ಟಗರು, ಕಡ್ಡಿಪುಡಿ ನಂತರ ಸೂರಿ-ಶಿವಣ್ಣ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಸಿನಿಮಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery