ರಾಜು ಕನ್ನಡ ಮೀಡಿಯಂ ಹಾಗೂ ಫಸ್ಟ್ ರ್ಯಾಂಕ್ ರಾಜು. ಎರಡೂ ಚಿತ್ರಗಳಲ್ಲಿ ಚಿತ್ರತಂಡ ಹೆಚ್ಚೂ ಕಡಿಮೆ ಒಂದೇ. ನಿರ್ಮಾಪಕರಷ್ಟೇ ಬೇರೆ. ತೆರೆಗೆ ಸಿದ್ಧವಾಗಿರುವ ಈ ಚಿತ್ರದಲ್ಲೂ ರಾಜು ಇದ್ದಾನೆ. ಹೀಗಿರುವಾಗ ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನು ವ್ಯತ್ಯಾಸ..?
ಫಸ್ಟ್ ರ್ಯಾಂಕ್ ರಾಜು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ರ್ಯಾಂಕ್ ಸ್ಟೂಡೆಂಟ್ ಕಥೆಯಾದರೆ, ರಾಜು ಕನ್ನಡ ಮೀಡಿಯಂ, ಕನ್ನಡದ ಮಾಧ್ಯಮದಲ್ಲಿ ಕಲಿತ, ಇಂಗ್ಲಿಷ್ ಗೊತ್ತಿಲ್ಲದ ಪ್ರತಿಭಾವಂತನ ಕಥೆ. ಇನ್ನು ಚಿತ್ರಕ್ಕೆ ರಾಜು ಎಂದು ಹೆಸರಿಡೋಕೂ ಕಾರಣಗಳಿವೆ. ಏಕೆಂದರೆ, ನಾಯಕ ನಟ ಗುರುನಂದನ್ ಅವರಿಗೇ ತಮ್ಮ ಹೆಸರು ಮರೆತುಹೋಗುವಷ್ಟು ರಾಜು ಆಗಿ ಗುರುತಿಸಿಕೊಂಡುಬಿಟ್ಟಿದ್ದಾರೆ. ಸ್ಕೂಲು ಹುಡುಗನಿಂದ ಪ್ರಬುದ್ಧ ಯುವಕನವರೆಗೆ ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಗುರುನಂದನ್‍ಗೆ, ಚಿತ್ರದ ಮೇಲೆ ಭರ್ಜರಿ ನಿರೀಕ್ಷೆಯಿದೆ.
ಕಿಚ್ಚ ಸುದೀಪ್ ಜೊತೆ ನಟಿಸಿದ್ದು ನನ್ನ ಪುಣ್ಯ ಎನ್ನುವ ಗುರುನಂದನ್‍ಗೆ, ಅವರ ಜೊತೆ ನಟಿಸಿದ್ದು ಮರೆಯಲಾಗದ ಅನುಭವವಂತೆ. ನಿರ್ಮಾಪಕ ಮತ್ತು ನಿರ್ದೇಶಕರಿಬ್ಬರಿಗೂ ಕಥೆ & ಚಿತ್ರಕಥೆಯ ಮೇಲೆ ನಂಬಿಕೆಯಿತ್ತು. ಇನ್ನು ಚಿತ್ರದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಬಲ್ಲ ಡೈಲಾಗುಗಳಿಗೆ ಬರವಿಲ್ಲ.