ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ದನಕಾಯೋನು ಚಿತ್ರ ನಿರ್ದೇಶಿಸಿದ್ದಕ್ಕೆ ಬರಬೇಕಿದ್ದ ಸಂಭಾವನೆ ಇನ್ನೂ ಬಂದಿಲ್ಲ. ನಿರ್ಮಾಪಕ ಕನಕಪುರ ಶ್ರೀನಿವಾಸ್ ಚಿತ್ರವನ್ನು ರಿಲೀಸ್ ಮಾಡಿ, ಲಾಭವನ್ನು ಮಾಡಿಕೊಂಡರಾದರೂ ತಂತ್ರಜ್ಞರಿಗೆ ಕೊಡಬೇಕಾದ ಸಂಭಾವನೆಯನ್ನೇ ಕೊಡದೆ ಕೈ ಎತ್ತಿಬಿಟ್ಟಿದ್ದಾರೆ.
ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವ ಸುಳಿವು ಕೊಟ್ಟಿದ್ದರು ಯೋಗರಾಜ್ ಭಟ್. ಏಕೆಂದರೆ, ಅದೇ ಕನಕಪುರ ಶ್ರೀನಿವಾಸ್ ಅವರ ಭರ್ಜರಿ ಚಿತ್ರ ರಿಲೀಸ್‍ಗೆ ರೆಡಿಯಾಗಿತ್ತು. ಆಗ ಮತ್ತೊಮ್ಮೆ ಸಂಧಾನಕ್ಕೆ ಬಂದ ಕನಕಪುರ ಶ್ರೀನಿವಾಸ್, ಫಿಲಂ ಚೇಂಬರ್‍ನಲ್ಲಿ ಭಟ್ಟರಿಗೆ ಮೂರು ಚೆಕ್ ಕೊಟ್ಟು, ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದರು. ಭಟ್ಟರೂ ಕೂಡಾ ಭರವಸೆಯಿಲ್ಲದಿದ್ದರೂ ದೊಡ್ಡವರ ಮಾತಿಗೆ ಮಣಿದಿದ್ದರು.
ಈಗ ಶ್ರೀನಿವಾಸ್ ಕೊಟ್ಟಿದ್ ಮೂರೂ ಚೆಕ್‍ಗಳು ಬೌನ್ಸ್ ಆಗಿವೆಯಂತೆ. ಇನ್ನು ಮುಂದಿನ ದಾರಿ ಕಾನೂನು ಹೋರಾಟ ಮಾತ್ರ ಎಂದಿದ್ದಾರೆ ಯೋಗರಾಜ್ ಭಟ್. ನ್ಯಾಯಾಲಯದ ಮೆಟ್ಟಿಲೇರುವುದು ಭಟ್ಟರಿಗೆ ಈಗ ಅನಿವಾರ್ಯವಾಗಿದೆ. ಅತ್ತ ಕನಕಪುರ ಶ್ರೀನಿವಾಸ್ ಭಟ್ಟರಿಗಾಗಲೀ, ಫಿಲಂ ಚೇಂಬರ್‍ನವರಿಗಾಗಲೀ ಕೈಗೆ ಸಿಗದೆ ಓಡಾಡಿಕೊಂಡಿದ್ದಾರೆ.