ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ತಾನು ಸೀರಿಯಸ್ಸಾಗಿದ್ದುಕೊಂಡು ನೋಡುವವರನ್ನು ನಗಿಸುವುದು ಚಿತ್ರದ ಹೀರೋ ಗುರುನಂದನ್ ಸ್ಪೆಷಾಲಿಟಿ. ಆದರೆ, ಇಂಥ ಹುಡುಗನೂ ನಾಚುವಂತೆ ಮಾಡಿದ್ದು ಅಂಬರೀಷ್. ಚಿತ್ರದ ಟ್ರೇಲರ್ ನೋಡಿದ ಅಂಬರೀಷ್ `ನಿಜಕ್ಕೂ ನಿಮ್ಮ ಹೀರೋ ತುಂಬಾ ಕಷ್ಟಪಟ್ಟಿದ್ದಾನೆ. ತಾಯಿ ಜೊತೆ ಹೋಗುತ್ತಾ ಇರುವ ಹೀರೋಯಿನ್‍ಗೆ ಹಿಂದಿನಿಂದ ಕಲ್ಲು ಹೊಡೆಯೋದು ಅಂದ್ರೆ ಏನ್ ತಮಾಷೆನಾ..? ಎಂದು ಛೇಡಿಸಿದ್ದಾರೆ.
ರಘುನಂದನ್ ನಾಚಿ ನೀರಾದರೆ, ಅಂಬರೀಷ್ ಗಹಗಹಿಸಿ ನಕ್ಕಿದ್ದಾರೆ. ಚಿತ್ರದಲ್ಲಿರೋದು ಜಾಲಿ ಜಾಲಿ ಕಥೆ. ಹಾಗೆಂದು ಸೀರಿಯಸ್‍ನೆಸ್ ಇಲ್ಲ ಎಂದುಕೊಳ್ಳಬೇಡಿ. ಚಿತ್ರದಲ್ಲೊಂದು ಉತ್ತಮ ಸಂದೇಶವಿದೆ. ನಿರ್ಮಾಪಕ ಸುರೇಶ್ ಹಾಗೂ ನಿರ್ದೇಶಕ ನರೇಶ್‍ಗೆ ಒಂದು ಒಳ್ಳೆಯ ಚಿತ್ರ ಕೊಟ್ಟಿದ್ದೇವೆ ಎಂಬ ಖುಷಿಯೂ ಇದೆ.