` ಮಲ್ಟಿಪ್ಲೆಕ್ಸ್ ಕನ್ನಡ ವಿರೋಧಿ ಪಾಲಿಟಿಕ್ಸ್ - ದಯವಿಟ್ಟು ಗಮನಿಸಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dayavittu gamanisi blasts against multiplex
Dayavittu Gamanisi

ದಯವಿಟ್ಟು ಗಮನಿಸಿ. ರೋಹಿತ್ ಪದಕಿ ನಿರ್ದೇಶನದ ರಘು ಮುಖರ್ಜಿ, ರಾಜೇಶ್ ನಟರಂಗ, ಮೇಘನಾ ರಾಜ್, ಭಾವನಾ ರಾವ್, ಪ್ರಕಾಶ್ ಬೆಳವಾಡಿ, ಸಂಯುಕ್ತಾ ಹೊರನಾಡು, ವಸಿಷ್ಠ ಅಭಿನಯದ ವಿಭಿನ್ನ ಚಿತ್ರ. ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಚಿತ್ರ ಮಲ್ಟಿಪ್ಲೆಕ್ಸ್‍ನವರ ಕನ್ನಡ ವಿರೋಧಿ ರಾಜಕೀಯಕ್ಕೆ ಬಲಿಯಾಗುತ್ತಿದೆ ಎಂದು ಚಿತ್ರತಂಡ ದೂರಿದೆ.

ಚಿತ್ರವನ್ನು ಮಲ್ಟಿಪ್ಲೆಕ್ಸ್‍ನಲ್ಲಿ ಲೇಟ್ ನೈಟ್ ಶೋಗಳನ್ನಷ್ಟೇ ನೀಡುತ್ತಿದ್ದಾರೆ. ಬೇಕಾಬಿಟ್ಟಿ ಟೈಮಿಂಗ್ ಕೊಟ್ಟರೆ ಏನು ಮಾಡೋದು..? ಚಿತ್ರಕ್ಕೆ ಜನರೇನೋ ಬರುತ್ತಿದ್ದಾರೆ. ಆದರೆ, ಬರುವವರಿಗೆ ಸೂಕ್ತ ಸಮಯ ಒದಗಿಸುವ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.

ಪರಭಾಷೆ ಚಿತ್ರಗಳಿಗೆ ಸೂಕ್ತ ಶೋ ಒದಗಿಸುವ ಮಲ್ಟಿಪ್ಲೆಕ್ಸ್ ಮಂದಿ, ಕನ್ನಡ ಚಿತ್ರಕ್ಕೆ ಬೇಕಾಬಿಟ್ಟಿ ಶೋ ಕೊಡುತ್ತಾರೆ. ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ ನಮಗಿದೆ. ಆದರೆ, ಅದನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನಿರ್ಮಾಪಕರ ಬೇಸರ.

ನಿರ್ದೇಶಕ ರೋಹಿತ್ ಪದಕಿ ಅವರಂತೂ ಈ ಚಿತ್ರಕ್ಕೆ ಪ್ರೋತ್ಸಾಹ ಸಿಕ್ಕದೆ ಹೋದರೆ, ಇದೇ ನನ್ನ ಕೊನೆಯ ಚಿತ್ರವಾಗಬಹುದು ಎಂದಿದ್ದಾರೆ. ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಟ್ಟಿರುವುದೂ ಕೂಡಾ ಇದಕ್ಕೆ ಕಾರಣವಾಗಿದೆ. ಮಕ್ಕಳೊಂದಿಗೆ ಬಂದವರಿಗೆ ಟಿಕೆಟ್ ಸಿಗದೆ ವಾಪಸ್ ಹೋಗುತ್ತಿದ್ದಾರೆ. ಚಿತ್ರದಲ್ಲಿ ಎ ಸರ್ಟಿಫಿಕೇಟ್ ಕೊಡುವಂಥದ್ದೇನೂ ಇರಲಿಲ್ಲ ಎಂದು ಸೆನ್ಸಾರ್ ವಿರುದ್ಧವೂ ಸಿಟ್ಟಾಗಿದ್ದಾರೆ ರೋಹಿತ್ ಪದಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery