ಎಂಥದು ಮಾರ್ರೆ.. ಹೀಂಗೆ ಮಂಡೆ ಬಿಸಿ ಮಾಡುದಾ.. ಅಣ್ಣಾವ್ರೆ ಇಲ್ಲ.. ಇಂಥೆಲ್ಲ ಆಗಲಿಕ್ಕುಂಟಾ.. ಎಂದು ನೀವು ಕೇಳೇ ಕೇಳ್ತೀರಿ. ಆದರೆ, ಇವರೆಲ್ಲ ಒಟ್ಟಿಗೇ ತೆರೆಗೆ ಬರ್ತಿರೋದು ನಿಜ. ಆದರೆ, ನಿಜವಾಗಿ ಅಲ್ಲ, ಮುಖವಾಡಗಳಾಗಿ.
ರಾಜ ಲವ್ಸ್ ರಾಧೆ ಚಿತ್ರದಲ್ಲಿ ವಿಲನ್‍ಗಳನ್ನು ಹೊಡೆಯುವಾಗ ಸ್ಟಾರ್‍ಗಳ ಮುಖವಾಡ ಬಳಸಿಕೊಳ್ಳಲಾಗಿದೆ. ರೌಡಿಗಳು ಅಟ್ಟಿಸಿಕೊಂಡು ಬರುವ ದೃಶ್ಯದಲ್ಲಿ ತಪ್ಪಿಸಿಕೊಳ್ಳೋಕೆ ಹೀರೋಗಳು ಬಳಸುವ ತಂತ್ರ, ಸ್ಟಾರ್‍ಗಳ ಮುಖವಾಡ.
ಮುಖವಾಡ ಹಾಕಿಕೊಂಡವರು, ಯಾವ್ಯಾವ ಸ್ಟಾರ್‍ಗಳ ಮುಖವಾಡ ಹಾಕಿಕೊಂಡಿರುತ್ತಾರೋ ಅವರದ್ದೇ ಸ್ಟೈಲ್‍ನಲ್ಲಿ ಫೈಟ್ ಮಾಡ್ತಾರೆ. ಅವರದ್ದೇ ಆದ ಡೈಲಾಗ್ ಹೊಡೀತಾರೆ. ಇಂತಹ ಮುಖವಾಡಗಳಾಗಿ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಹಾಗೂ ದರ್ಶನ್ ಮಾಸ್ಕ್‍ಗಳು ಬಳಕೆಯಾಗಿವೆ.