ನಭಾ ನಟೇಶ್. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಪ್ರತಿಭೆ. ಅವರೀಗ ತಮಿಳು, ತೆಲುಗಿನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ರವಿಬಾಬು ನಿರ್ದೇಶನದ ಅದಿಗೋ ಚಿತ್ರದಲ್ಲಿ ನಟಿಸಿದ್ದ ನಭಾ ನಟೇಶ್, ಸುಧೀರ್ ಬಾಬು ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸುಧೀರ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಬಾಮೈದ. ಈಗಾಗಲೇ ಪ್ರೇಮಕಥಾಚಿತ್ರಂ ಹಾಗೂ ಭಲೆ ಮಂಚಿ ರೋಜು ಎಂಬ ಎರಡು ಹಿಟ್ ಕೊಟ್ಟಿರುವ ನಟ. ಅವರ ಚಿತ್ರಕ್ಕೀಗ ನಭಾ ನಟೇಶ್ ನಾಯಕಿ. ಇದರ ಮಧ್ಯೆ ತಮಿಳು ಚಿತ್ರವೊಂದಕ್ಕೆ ಮಾತುಕತೆ ನಡೆಯುತ್ತಿದೆಯಂತೆ. ಹಾಗೆಂದು ಅಲ್ಲಯೇ ಇರಲ್ಲ. ಕನ್ನಡದಲ್ಲೂ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎನ್ನುತ್ತಾರೆ ನಭಾ.