` ನವೆಂಬರ್ 1ಕ್ಕೆ ಕನಕ ವಿಶೇಷ ಟ್ರೇಲರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kanaka special trailer for rajyotsava
Duniya Vijay, R Chandru Image

ಕನಕ. ದುನಿಯಾ ವಿಜಿ ಹಾಗೂ ಹರಿಪ್ರಿಯಾ ನಟಿಸಿರುವ ಸಿನಿಮಾ. ದುನಿಯಾ ವಿಜಿ ಆಟೋ ಡ್ರೈವರ್ ಆಗಿ, ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟಿಸಿದೆ. ಭಾರಿ ನಿರೀಕ್ಷೆ ಮೂಡಿಸಿದೆ. ಏಕೆಂದರೆ, ಚಿತ್ರದ ನಿರ್ದೇಶಕ ಆರ್.ಚಂದ್ರು.

ತಾಜ್‍ಮಹಲ್, ಚಾರ್‍ಮಿನಾರ್, ಮೈಲಾರಿ, ಬ್ರಹ್ಮ, ಮಳೆ.. ಹೀಗೆ ವಿಭಿನ್ನ ಚಿತ್ರಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ನಿರ್ದೇಶಕ ಆರ್. ಚಂದ್ರು. ಹೀಗಾಗಿಯೇ ಚಂದ್ರು ಮತ್ತು ದುನಿಯಾ ವಿಜಿ ಜುಗಲ್‍ಬಂದಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರದ ನಾಯಕ ನಟ ರಾಜ್ ಅಭಿಮಾನಿ. ಹೀಗಾಗಿ ಈ ಬಾರಿಯ ರಾಜ್ಯೋತ್ಸವಕ್ಕೆ ವಿಶೇಷವಾಗಿ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಅದು ಈ ಬಾರಿಯ ಕನ್ನಡ ಹಬ್ಬಕ್ಕೆ ಕನಕ ಚಿತ್ರತಂಡ ನೀಡುತ್ತಿರುವ ಕಾಣಿಕೆ.

Sagutha Doora Doora Movie Gallery

Popcorn Monkey Tiger Movie Gallery