ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ವೈವಾಹಿಕ ಬಂಧನದ ಮೊದಲ ಹೆಜ್ಜೆ ಇಡಲಿದ್ದಾರೆ. ಇಂದು ಅವರಿಬ್ಬರಿಗೂ ನಿಶ್ಚಿತಾರ್ಥ. ಸುಮಾರು 10 ವರ್ಷಗಳ ಪ್ರೀತಿಗೆ ಎಂಗೇಜ್‍ಮೆಂಟ್ ರಿಂಗ್‍ನ ಮುದ್ರೆ ಬೀಳುವ ದಿನ.
ಕಲಾವಿದರ ಕುಟುಂಬದ ಕುಡಿಗಳು, ಮದುವೆಯಾಗುತ್ತಿರುವುದು ಇಡೀ ಚಿತ್ರರಂಗದಲ್ಲಿ ಒಂದು ಹಬ್ಬವನ್ನೇ ಸೃಷ್ಟಿಸಿದೆ ಎನ್ನಬೇಕು.
ಮೇಘನಾ ರಾಜ್, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳು. ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಅವರ ಸೋದರಿಯ ಮಗ. ಚಿತ್ರರಂಗದ ಎರಡು ಕುಟುಂಬಗಳು ಬೀಗರ ಕುಟುಂಬವಾಗುತ್ತಿರುವುದೇ ಖುಷಿಗೆ ಕಾರಣ.
ಇಂದು ಸಂಜೆ ಲೀಲಾ ಪ್ಯಾಲೇಸ್‍ನಲ್ಲಿ ವಿಧ್ಯುಕ್ತ ಸಮಾರಂಭ ನಡೆಯಲಿದೆ. ಬೆಳಗ್ಗೆ ಮನೆಗಳಲ್ಲಿ ಶಾಸ್ತ್ರೋಕ್ತ ಸಂಪ್ರದಾಯಗಳು ನೆರವೇರಲಿವೆ.