ನಮ್ಮಿಬ್ಬರ ಪ್ರೀತಿ ವಿಚಾರ ಹೇಳೋವಾಗ ತಡವಾಯ್ತು. ಆದರೆ ಬೇಜಾರೇನಿಲ್ಲ. ಸಂಬಂಧ ಮುಚ್ಚಿಡುವ ಅವಶ್ಯಕತೆಯೆನೂ ಇರಲಿಲ್ಲ. ಅದನ್ನು ಜನರಿಗೆ ಹೇಳುವ ಸಂದರ್ಭ ಕೂಡಿ ಬಂದಿರಲಿಲ್ಲ ಅಷ್ಟೆ. ಹೀಗೆ ಹೆಳುತ್ತಾ ಮತ್ತು ಚಿರು ನಡುವಿನ 10 ವರ್ಷದ ಪ್ರೇಮಕಥೆ ಬಿಚ್ಚಿಟ್ಟಿದ್ದಾರೆ ಮೇಘನಾ.
ಅವರಿಬ್ಬರ ಪರಿಚಯವಾಗಿದ್ದು ಯಾವುದೋ ಕಾರ್ಯಕ್ರಮದಲ್ಲಿ. ಅಮ್ಮನೇ ಪರಿಚಯ ಮಾಡಿಸಿದರು. ಚಿರಂಜೀವಿ ಸರ್ಜಾ ನೋಡೋಕೆ ರಫ್ ಅಷ್ಟೆ. ನಾಚಿಕೆ ಸ್ವಭಾವದ ಕರುಣಾಮಯಿ. ಹೀಗಾಗಿಯೇ ಚಿರು ಇಷ್ಟವಾದರು ಎನ್ನುತ್ತಾರೆ ಮೇಘನಾ. ನಿಶ್ಚಿತಾರ್ಥದ ವಿಚಾರವನ್ನು ತಂದೆ ಮುಚ್ಚಿಟ್ಟಿದ್ದಕ್ಕೆ ಕಾರಣ, ಅದು ನಮ್ಮ ಖಾಸಗಿ ವಿಷಯ ಎಂಬುದಷ್ಟೆ. ಅಲ್ಲದೆ ಆ ವಿಷಯವನ್ನು ಚಿರಂಜೀವಿ ಹುಟ್ಟುಹಬ್ಬದ ದಿನವೇ ಅನೌನ್ಸ್ ಮಾಡಬೇಕು ಎಂದು ನಿರ್ಧರಿಸಿದ್ದೆವು. ಇದರ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ. ಇಷ್ಟನ್ನೂ ಹೇಳಿಕೊಂಡಿರುವ ಮೇಘನಾ, ಮದುವೆ ಯಾವಾಗ ಅನ್ನೋದು ಫಿಕ್ಸ್ ಆಗಿಲ್ಲ ಎಂದಿದ್ದಾರೆ.
ನನ್ನದು ಕೋಪದ ಸ್ವಭಾವ. ನನಗೆ ವಿರುದ್ಧವಾದ ವ್ಯಕ್ತಿತ್ವ ಚಿರಂಜೀವಿಯದ್ದು. ಅವರು ಸಿಟ್ಟು ಮಾಡಿಕೊಳ್ಳಲ್ಲ ಎಂದು ಚಿರಂಜೀವಿ ವ್ಯಕ್ತಿತ್ವ ಹೊಗಳುವ ಮೇಘನಾಗೆ, ತನ್ನ ತಾಯಿ ಹುಷಾರಿಲ್ಲದಿದ್ದಾಗ, 200 ಕಿ.ಮೀ. ಡ್ರೈವ್ ಮಾಡಿಕೊಂಡು ಬಂದು ನನ್ನ ಜೊತೆ ಇದ್ದ ಚಿರಂಜೀವಿ ಬಗ್ಗೆ ವಿಶೇಷ ಅಕ್ಕರೆಯೂ ಇದೆ.
ಮದುವೆ ಯಾವಾಗ ಅಂತಾ ತಲೆ ಕೆಡಿಸಿಕೊಂಡ್ರೆ ಸೌಂದರ್ಯ ಹಾಳಾಗುತ್ತೆ. ಅದನ್ನೆಲ್ಲ ಹಿರಿಯರಿಗೆ ಬಿಟ್ಟಿದ್ದೇವೆ ಎಂದು ನಗುವ ಮೇಘನಾ, ಎಂಜೇಜ್ಮೆಂಟ್ಗೆ ರೆಡಿಯಾಗುತ್ತಿದ್ದಾರೆ.
Related Articles :-
ಮೇಘನಾಗೂ ನಂಗೂ ಮದ್ವೆ ಗ್ಯಾರಂಟಿ - ಚಿರಂಜೀವಿ
Chiru Confirms His Engagement With Meghana Raj
ಅ.22ಕ್ಕೆ ಚಿರು-ಮೇಘನಾ ನಿಶ್ಚಿತಾರ್ಥ
ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?