` ದಯವಿಟ್ಟು ಗಮನಿಸಿ ಸಿನಿಮಾ ನೋಡುವಾಗ ಇದು ಗೊತ್ತಿರಲಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dayavittu gamanisi image
Dayavittu Gamanisi Movie Image

ದಯವಿಟ್ಟು ಗಮನಿಸಿ ತೆರೆಗೆ ಬಂದಾಯ್ತು. ತನ್ನ ಟ್ರೇಲರ್, ಹಾಡುಗಳ ಮೂಲಕವೇ ರೋಚಕತೆ ಸೃಷ್ಟಿಸಿದ ಈ ಚಿತ್ರವನ್ನು ನೋಡೋಕೆ ಹೋದಾಗ, ಕೆಲವು ವಿಷಯ ನಿಮ್ಮ ಗಮನದಲ್ಲಿರಲಿ. ದಯವಿಟ್ಟು ಗಮನಿಸಿ ಒಂದು ಸಿನಿಮಾ ಅಲ್ಲ. ಅದು ನಾಲ್ಕು ಸಿನಿಮಾ. ಸಿಕ್ಕಾಪಟ್ಟೆ ಕನ್‍ಫ್ಯೂಸ್ ಆಗಬೇಡಿ.

ಚಿತ್ರದಲ್ಲಿ ಒಟ್ಟು 4 ಕಥೆಗಳಿವೆ. 4 ಕಥೆಗಳಿಗೂ ಒಂದೊಂದು ಟೈಟಲ್ ಇದೆ. ದಯವಿಟ್ಟು ಗಮನಿಸಿ, ಅನ್ವರ್ಥ.. ಹೀಗೆ.. ಒಂದೊಂದು ಕಥೆಯಲ್ಲಿ ಒಬ್ಬೊಬ್ಬ ನಾಯಕ, ನಾಯಕಿ.. ಪಾತ್ರಧಾರಿಗಳು. ಪ್ರತಿ ಕಥೆಗೂ ಹೊಸ ಟೈಟಲ್ ಬರುತ್ತೆ. ಇದು ಕನ್ನಡದಲ್ಲಿ ಬಹುಶಃ ಮೊತ್ತ ಮೊದಲ ಪ್ರಯೋಗ. ಇಂಥಾದ್ದೊಂದು ಈ ಹಿಂದೆ ಆಗಿರುವ ನೆನಪಿಲ್ಲ. ತಮ್ಮ ಚಿತ್ರದಲ್ಲಿ ಅಂಥಾದ್ದೊಂದು ಸಾಹಸ ಮೆರೆದಿದ್ದಾರೆ ರೋಹಿತ್ ಪದಕಿ. ಈ ಸಾಹಸಕ್ಕೆ ನೀರೆರೆದು ಪೋಷಿಸಿದ್ದಾರೆ ನಿರ್ಮಾಪಕ ಕೃಷ್ಣ ಸಾರ್ಥಕ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery