` ವಿಲನ್ ಹೀರೋ ಆದಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vashishtha simha becomes hero
Vashistha Simha Image

ವಸಿಷ್ಟ ಸಿಂಹ. ಖ್ಯಾತಿಗೆ ಬಂದಿದ್ದು ರಾಜಾಹುಲಿ ಚಿತ್ರದಿಂದ. ಸಾಫ್ಟ್‍ವೇರ್ ಉದ್ಯೋಗ ಬಿಟ್ಟು, ಬಣ್ಣದ ಲೋಕಕ್ಕೆ ಬಂದು ಮಿಂಚುತ್ತಿರುವ ಪ್ರತಿಭೆ. ಹೀರೋ ಪಾತ್ರಕ್ಕಿಂತ ವಿಲನ್ ಪಾತ್ರವೇ ಇಷ್ಟ ಎನ್ನುವ ವಸಿಷ್ಟ ಸಿಂಹ, ದಯವಿಟ್ಟು ಗಮನಿಸಿ ಚಿತ್ರದಲ್ಲಿ ಲವ್ವರ್ ಬಾಯ್.

ಭಾಗ್ಯಲಕ್ಷ್ಮಿ ಟೀಚರ್ ಪಾತ್ರದಲ್ಲಿ ನಟಿಸಿರುವ ಸಂಗೀತಾ ಭಟ್ ಅವರನ್ನು ಪ್ರೇಮಿಸುವ ಹುಡುಗನ ಪಾತ್ರ. ಆ ಚಿತ್ರದ ಕಥೆಯನ್ನು ರೋಹಿತ್ ಪದಕಿ ಕರೆಕ್ಟ್ ಆಗಿ 20 ನಿಮಿಷ ಟೈಂ ತೆಗೆದುಕೊಂಡು ಹೇಳಿದ್ದರಂತೆ. ಅಲ್ಲದೆ, ಪಾತ್ರಕ್ಕಾಗಿ ಧ್ವನಿ, ಲುಕ್ಕು ಎಲ್ಲವನ್ನೂ ಬದಲಿಸಿಕೊಂಡ ವಸಿಷ್ಟ, ಬಾಡಿಲಾಂಗ್ವೇಜ್ ಮತ್ತು ಕಣ್ಣಿನಲ್ಲೇ ಆಟವಾಡಿಬಿಟ್ಟಿದ್ದಾರೆ.

ವಸಿಷ್ಟ ಅವರೇ ಹಾಡಿರುವ ಮರೆತೇ ಹೋದೆನು ಅನ್ನೋ ಹಾಡು ಸೆನ್ಸೇಷನ್ ಸೃಷ್ಟಿಸಿದೆ. ಚಿತ್ರದಲ್ಲಿ ಇವರ ಕಥೆ ಅನ್ವರ್ಥ ಅನ್ನೋ ಟೈಟಲ್‍ನಲ್ಲಿ ಬರುತ್ತೆ. ನಾಲ್ಕೂ ಕಥೆಗಳಿಗೆ ಒಂದೇ ಕ್ಲೈಮಾಕ್ಸ್ ಇದೆಯಂತೆ. ಇದು ಹೇಗೆ ಅನ್ನೋದನ್ನು ಅರ್ಥ ಮಾಡಿಕೊಳ್ಳೋಕೆ ದಯವಿಟ್ಟು ಗಮನಿಸಿ ಚಿತ್ರವನ್ನ ಒಂದ್ಸಲ ನೋಡಲೇಬೇಕು.

Rambo 2 Movie Gallery

Rightbanner02_kumari_21f_inside

Kumari 21 Movie Gallery