` ನಾಲ್ಕು ಕಥೆ, ಐವರು ಹೀರೋಯಿನ್ಸ್.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dayavittu gamanisi image
Dayavittu Gamanisi Movie Image

ಒಂದು ಸಿನಿಮಾ. 4 ಕಥೆ. ಐವರು ನಾಯಕಿಯರು. ನಾಲ್ವರು ಹೀರೋಗಳು.. ಏನಪ್ಪಾ ಇದು ಕಥೆ ಅಂತಾ ತಲೆಗೆ ಹುಳ ಹತ್ತಿಕೊಳ್ತಾ..? ಡೈರೆಕ್ಟಾಗಿ ಥಿಯೇಟರ್‍ಗೆ ಹೋಗಿ, ಒಂದ್ಸಲ ದಯವಿಟ್ಟು ಗಮನಿಸಿ ನೋಡಿ ಬನ್ನಿ. ಕನ್ನಡದಲ್ಲಿ ಒಂದು ವಿಭಿನ್ನ ಪ್ರಯತ್ನದ ಸಾಹಸ ಈ ಚಿತ್ರದಲ್ಲಿ ಆಗಿದೆ. ಚಿತ್ರದ ಐವರು ನಾಯಕಿಯರಾಗಿ ಕಾಣಿಸಿಕೊಂಡಿರೋದು ಮೇಘನಾ ರಾಜ್, ಭಾವನಾ ರಾವ್, ಸಂಗೀತಾ ಭಟ್, ಸಂಯುಕ್ತಾ ಹೊರನಾಡು ಹಾಗೂ ಸುಕೃತಾ ವಾಗ್ಲೆ.

ಟೀಚರಮ್ಮ ಸಂಗೀತಾ ಭಟ್ - ಎರಡನೇ ಸಲ ಚಿತ್ರದಲ್ಲಿ ಅಚ್ಚರಿ ಮೂಡಿಸಿದ್ದ ಸಂಗೀತಾ ಭಟ್‍ಗೆ ಇಲ್ಲಿ ಸ್ಕೂಲ್ ಟೀಚರ್ ಪಾತ್ರವಿದೆ. ಪಾತ್ರದ ಹೆಸರು ಭಾಗ್ಯಲಕ್ಷ್ಮಿ.  ಇವರನ್ನು ಲವ್ ಮಾಡೋದು ವಸಿಷ್ಟ ಸಿಂಹ. ವಸಿಷ್ಟ ಸಿಂಹ ಅವರದ್ದೊಂದು ಮನಮುಟ್ಟುವ ಹಾಡು ಚಿತ್ರದಲ್ಲಿದೆ.

ಸಂಯುಕ್ತಾ ಸಖತ್ ಬೋಲ್ಡ್ ಮಗಾ - ಚಿತ್ರದ ಟ್ರೇಲರ್ ನೋಡಿದವರನ್ನು ಬೆಚ್ಚಿ ಬೀಳಿಸೋದು ಸಂಯುಕ್ತಾ ಹೊರನಾಡು ಅವರ ಬೋಲ್ಡ್ ಡೈಲಾಗ್ಸ್. ರಘು ಮುಖರ್ಜಿ ಅವರ ಜೊತೆಗಿನ ಸಂಭಾಷಣೆ, ಹುಡುಗರಿಗೆ ಕಚಗುಳಿ ಇಟ್ಟರೆ, ಹುಡುಗಿಯರನ್ನು ಬೆಚ್ಚಿ ಬೀಳಿಸುತ್ತೆ. ಐಟಿ ಕಂಪೆನಿ ಉದ್ಯೋಗಿಯಾಗಿ, ಸಿಗರೇಟು ಸೇದುತ್ತಾ, ಬುಲೆಟ್ ಓಡಿಸುತ್ತ ನೇರವಾಗಿ ಆ ವಿಚಾರವನ್ನೇ ಮಾಡುವ ಪರಿ ದಿಗಿಲು ಹುಟ್ಟಿಸೋದು ಸುಳ್ಳಲ್ಲ.

ಜರ್ನಲಿಸ್ಟ್ ಸುಕೃತಾ - ಒಂದು ರೀತಿಯ ಗಂಡುಬೀರಿ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಸುಕೃತಾ ಇಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಒಬ್ಬ ಸಂಚಾರಿಯ ಜೀವನವನ್ನು ಹುಡುಕುತ್ತಾ ಹೋಗುವ ಪಾತ್ರ ಅವರದ್ದು.

ಭಾವನಾ ಕಣ್ಣಲ್ಲಿ ಹತಾಶೆ - ಭಾವನಾ ರಾವ್ ಅವರದ್ದು ಹತಾಶ ಗೃಹಿಣಿಯ ಪಾತ್ರ. ಸಣ್ಣ ಸಣ್ಣ ವಿಚಾರಕ್ಕೂ ಹತಾಶಗೊಳ್ಳುವ ಗೃಹಿಣಿಯಾಗಿ ನಟಿಸಿರುವ ಭಾವನಾ, ಯಾವಾಗಲೂ ನೊಂದು ಬೇಯುತ್ತಿರುವ ಪಾತ್ರವಂತೆ.

ಝುಮ್ ಎನ್ನಿಸೋದು ಮೇಘನಾ - ಅಸಾದುಲ್ಲಾ ದಾಡಿ ಬಿಟ್ಟ.. ಹಾಡು ಮತ್ತು ಒಂದೆರಡು ದೃಶ್ಯಗಳಲ್ಲಷ್ಟೇ ಬಂದು ಹೋಗುವ ಮೇಘನಾ, ಅಷ್ಟರಲ್ಲೇ ಕಿಚ್ಚು ಹಚ್ಚಿಬಿಡುತ್ತಾರೆ. ರೆಟ್ರೋ ಸ್ಟೈಲ್ ಹಾಡಿನಲ್ಲಿ ಜಾಸ್ ಸಿಂಗರ್ ಆಗಿ ಕಾಣಿಸಿಕೊಂಡಿರುವ ಮೇಘನಾ ಅವರ ಸ್ಟೈಲು ಮತ್ತು ಸ್ಮೈಲು.. ಪಡ್ಡೆಗಳ ಪಾಲಿಗೆ ರಸಗವಳ.

ದಯವಿಟ್ಟು ಗಮನಿಸಿ. ಇವೆಲ್ಲವನ್ನೂ ಮಿಸ್ ಮಾಡ್ಕೋಬೇಡಿ.

The Terrorist Movie Gallery

Kumari 21 Movie Gallery