ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರ ಚೇತರಿಕೆಗೆ ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿರುವಾಗ, ಅವರ ಪುತ್ರ ನಿಖಿಲ್ ಗೌಡ ಕುಮಾರಸ್ವಾಮಿ ಬರೆದ ಒಂದು ಫೇಸ್ಬುಕ್ ಆಪ್ತ ಬರಹ ವೈರಲ್ ಆಗಿದೆ.
ನನ್ನ ತಂದೆ ನಿಮ್ಮೆಲ್ಲರ ಹಾರೈಕೆಯಿಂದ ಗುಣಮುಖರಾಗುತ್ತಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿಗಳು.
ಪ್ರತಿಯೊಬ್ಬರಿಗೂ ತಂದೆ ತಾಯಿ ದೇವರಿದ್ದ ಹಾಗೆ. ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮನ್ನು ದೊಡ್ಡವರನ್ನಾಗಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ನಮ್ಮ ಕೆಲಸಗಳ ಒತ್ತಡದಿಂದ ತಂದೆ ತಾಯಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, ಒಂದು ಸಲ ಯೋಚನೆ ಮಾಡಿ. ಎಷ್ಟೋ ಜನರಿಗೆ ತಂದೆ ತಾಯಿ ಇರೋದಿಲ್ಲ. ನಮಗೆ ಸಮಯ ಇರೋದಿಲ್ಲ.
ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನಮ್ಮನ್ನು ಬೆಳೆಸಿದ ತಂದೆ, ತಾಯಿಯರಿಗೆ ಹಾಗಾಗಬಾರದು. ದಯವಿಟ್ಟು ಎಲ್ಲರೂ ಕಣ್ಣೆದುರೇ ಇರುವ ತಂದೆ ತಾಯಿಯರಿಗೆ ಹೆಚ್ಚಿನ ಸಮಯ ವಿನಿಯೋಗಿಸಿ. ಅವರ ಸೇವೆ ನಮ್ಮ ಕರ್ತವ್ಯ ಎಂದಿದ್ದಾರೆ ನಿಖಿಲ್ ಗೌಡ. ಅದು ಎಷ್ಟು ವೈರಲ್ ಆಗಿದೆಯೆಂದರೆ, ಒಂದು ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.