` ದರ್ಶನ್​ಗೆ ಬ್ರಿಟನ್ ​ನಲ್ಲಿ ಸನ್ಮಾನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan to be honored in uk parliment
Darshan Image

ಚಾಲೆಂಜಿಂಗ್ ಸ್ಟಾರ್ ದರ್ಶನ್, ಹೊಸ ಗೌರವವೊಂದಕ್ಕೆ ಪಾತ್ರರಾಗುತ್ತಿದ್ದಾರೆ. ಕರ್ನಾಟಕದ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿರುವ ದರ್ಶನ್ ಅವರನ್ನು ಬ್ರಿಟನ್​ನಲ್ಲಿ ಸನ್ಮಾನಿಸಲಾಗುತ್ತಿದೆ. ಕುರುಕ್ಷೇತ್ರ ಚಿತ್ರದ ಶೂಟಿಂಗ್​ನಲ್ಲಿರುವ ದರ್ಶನ್, ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಳೆ (ಅಕ್ಟೋಬರ್ 18) ಲಂಡನ್​ಗೆ ತೆರಳುತ್ತಿದ್ದಾರೆ. ಅಕ್ಟೋಬರ್ 19ರಂದು ಸನ್ಮಾನ ಸಮಾರಂಭ ನಡೆಯಲಿದೆ. ಅಕ್ಟೋಬರ್ 26ರಂದು ದರ್ಶನ್ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ಚಿತ್ರಲೋಕಕ್ಕೆ ಸ್ಪಷ್ಟಪಡಿಸಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಕುರುಕ್ಷೇತ್ರ ಚಿತ್ರದ ಸೆಟ್​ನಲ್ಲಿ ದೊಡ್ಡ ಸಂಭ್ರಮವೇ ನಡೆದಿದೆ. ಸೆಟ್​ನಲ್ಲಿದ್ದವರೆಲ್ಲ ದರ್ಶನ್ ಅವರನ್ನು ಅಭಿನಂದಿಸಿದ್ದಾರೆ. ದರ್ಶನ್ ಲಂಡನ್​ನಿಂದ ವಾಪಸ್ ಆದ ನಂತರ ಕುರುಕ್ಷೇತ್ರ ಚಿತ್ರತಂಡ  ಸನ್ಮಾನ ಸಮಾರಂಭ ಆಯೋಜಿಸಲು ಸಿದ್ಧತೆ ನಡೆಸಿದೆ.

ದರ್ಶನ್ ಅವರಿಗೆ ಚಿತ್ರಲೋಕ ಶುಭ ಹಾರೈಸುತ್ತದೆ.

Related Articles :-

Darshan To Be Honored In UK Parliament - EXCLUSIVE