ಸಂಯುಕ್ತಾ ಹೆಗಡೆ, ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡಾ ಹೌದು. ಇಡೀ ದೇಹವನ್ನು ತನಗೆ ಬೇಕಾದಂತೆ ಬಾಗಿಸುವಷ್ಟು ಫ್ಲೆಕ್ಸಿಬಲ್ ಆಗಿಟ್ಟುಕೊಂಡಿದ್ದಾರೆ. ಅದು ಹಲವು ವರ್ಷಗಳ ಶ್ರಮದ ಪ್ರತಿಫಲ. ಅದು ಫಲ ನೀಡಿರುವುದು ಕಾಲೇಜ್ ಕುಮಾರ್ ಚಿತ್ರದಲ್ಲಿ.
ಕಾಲೇಜ್ ಕುಮಾರ್ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ನಾಯಕಿ. ಚಿತ್ರದಲ್ಲಿ ಬಿಸಿಬಿಸಿ.. ಎಂಬ ಹಾಡೊಂದಿದೆ. ಆ ಹಾಡನ್ನು ಕಂಪೋಸ್ ಮಾಡಿರುವುದೇ ಕಾಲೇಜು ಹುಡುಗರಿಗಾಗಿ. ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಂಯುಕ್ತಾ ಅವರು ಆ ಹಾಡಿಗೆ ಹೆಜ್ಜೆ ಹಾಕಿದರು.
ಹಸಿಬಿಸಿ ಹಾಡು ಪ್ರೇಕ್ಷಕರ ಮನಸ್ಸು ಗೆದ್ದಿತು. ಸಂಯುಕ್ತಾ ಹೆಗಡೆ ನೃತ್ಯ ಹೃದಯ ಕದ್ದಿತು. ಎಲ್ಲರ ರಿಯಾಕ್ಷನ್ ಒಂದೇ.. ಸಖತ್ ಹಾಟ್ ಮಗಾ..