ರಾಜರಥ... ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ. ಹಳೆಯ ಟೀಂ ಜೊತೆಯಾಗಿರುವ ಕಾರಣದಿಂದ, ಸಿನಿಮಾ ನಿರೀಕ್ಷೆ ಹುಟ್ಟಿಸಿದೆ.
ಆದರೆ, ಈಗ ಗೊಂದಲ ಸೃಷ್ಟಿಸಿರೋದು ಈ ಪೋಸ್ಟರ್. ರಾಜರಥ ಸಿನಿಮಾದಲ್ಲಿ ತಮಿಳಿನ ಆರ್ಯ ನಟಿಸುತ್ತಿರುವದು ಗೊತ್ತೇ ಇದೆ. ಆರ್ಯ, ಕೆಂಪು ಬಣ್ಣದ ಜುಬ್ಬಾ ಧರಿಸಿಕೊಂಡು ಕೊಡೆ ಹಿಡಿದು ನಿಂತಿರುವ ಪೋಸ್ಟರ್ ಬಿಡುಗಡೆಯಾಗಿದೆ.
ವಿಶೇಷ ಅಂದ್ರೆ, ಪವನ್ ಕಲ್ಯಾಣ್ ನಟಿಸುತ್ತಿರುವ ತ್ರಿವಿಕ್ರಮ್ ನಿರ್ದೇಶನದ ಪವನ್ ಕಲ್ಯಾಣ್ ಅಭಿನಯದ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಅದರಲ್ಲಿಯೂ ಅಷ್ಟೆ. ಪವನ್ ಕಲ್ಯಾಣ್ ಕೊಡೆ ಹಿಡಿದು ನಿಂತಿರುವ ಚಿತ್ರ. ಬಟ್ಟೆಯ ಕಲರ್ ಕೂಡಾ ಸೇಮ್ ಟು ಸೇಮ್.
ರಾಜರಥದ ಪೋಸ್ಟರ್ ರಿಲೀಸ್ ಆಗಿದ್ದು ಅಕ್ಟೋಬರ್ 17ಕ್ಕೆ. ಪವನ್ ಕಲ್ಯಾಣ್ ಪೋಸ್ಟರ್ ಬಿಡುಗಡೆಯಾಗಿರೋದು ಅಕ್ಟೊಬರ್ 15ಕ್ಕೆ. ಇದು ಕಾಕತಾಳೀಯ ಇರಬಹುದೇನೋ.. ಆದರೆ, ಅಸಲಿ ಯಾವುದು.. ನಕಲಿ ಯಾವುದು ಅನ್ನೋ ಚರ್ಚೆಯನ್ನಂತೂ ಹುಟ್ಟುಹಾಕಿದೆ.