` ನಿವೇದಿತಾ ಗೌಡ ಮೊದಲ ದಿನವೇ ಹೊರಬರುತ್ತಾರಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
big boss contestant niveditha gowda
Niveditha Gowda Image

ನಿವೇದಿತಾ ಗೌಡ ಎಂಬ ಈ 18ರ ಬಾಲೆ, ಈಗ ಬಿಗ್​ಬಾಸ್ ಸ್ಪರ್ಧಿ. ಬಿಗ್​ಬಾಸ್ ಸ್ಪರ್ಧಿಗಳಲ್ಲೇ ಅತಿ ಚಿಕ್ಕ ವಯಸ್ಸಿನ ಹುಡುಗಿ, ಹುಟ್ಟಿದ್ದು, ಬೆಳೆದಿದ್ದು ಓದಿದ್ದು ಮೈಸೂರಿನಲ್ಲೇ ಆದರೂ ಸರಿಯಾಗಿ ಕನ್ನಡ ಮಾತನಾಡೋಕೆ ಬರಲ್ಲ. ಹೀಗಾಗಿ ಈಕೆಯ ಕನ್ನಡ ಕಂಗ್ಲಿಷ್ ಆಗಿಹೋಗಿದೆ. ಜಾಲತಾಣಗಳಲ್ಲಂತೂ ನಿವೇದಿತಾ ಗೌಡರನ್ನು ಸಂಜನಾ ಟ್ವಿನ್ ಅಂತಾನೇ ಕರೀತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ನಿವೇದಿತಾ ಗೌಡ.

ಅರ್ಧಗಂಟೆಗೊಮ್ಮೆ ಬಟ್ಟೆ ಬದಲಾಯಿಸುವುದು ಈಕೆಯ ಹವ್ಯಾಸವಂತೆ. ಅಡುಗೆ ಬರಲ್ಲ. ಡಬ್​ಸ್ಮ್ಯಾಶ್ ಅಂದ್ರೆ ತುಂಬಾನೇ ಇಷ್ಟ. ಹೀಗಿರುವ ನಿವೇದಿತಾ, ಬಿಗ್​ಬಾಸ್ ಮನೆಯ ಬಾರ್ಬಿ ಡಾಲ್. ಅದೇ ರೀತಿಯ ಡ್ರೆಸ್​ನಲ್ಲಿ ಬಂದಿದ್ದ ನಿವೇದಿತಾರ ಕನ್ನಡ ವೀಕ್ಷಕರನ್ನು ಸುಸ್ತು ಹೊಡೆಸಿರುವುದು ಸುಳ್ಳಲ್ಲ.

ಈ ನಿವೇದಿತಾ ಗೌಡ, ಮೊದಲ ದಿನವೇ ಎವಿಕ್ಷನ್​ಗೊಳಗಾಗುತ್ತಾರಾ..? ಅಂದರೆ, ಹೊರಹಾಕಲ್ಪಡುತ್ತಾರಾ..? ಅಂಥದ್ದೊಂದು ಕುತೂಹಲ ಹುಟ್ಟಿಸಿರುವುದು ಪರಮೇಶ್ವರ್ ಗುಂಡ್ಕಲ್ ಅವರ ಇನ್​ಸ್ಟಾಗ್ರಾಮ್ ಸ್ಟೇಟಸ್. ಬಹುಶಃ, ಹಾಗಾಗದೇ ಇರಬಹುದು. ಆದರೆ, ಅದು ಬಿಗ್​ಬಾಸ್ ಹೌಸ್. ಆದರೂ ಆಗಬಹುದು. ಒಟ್ಟಿನಲ್ಲಿ ಬಿಗ್​ಮನೆಯಲ್ಲಿ ಮೊದಲ ದಿನವೇ ಭರಪೂರ ಮನರಂಜನೆಯಂತೂ ಕಾದಿದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery