ಬಿಗ್‍ಬಾಸ್ ಶುರುವಾಗಲಿದೆ ಎನ್ನುವುದು ಸುದ್ದಿಯಾಗುವುದೇ ತಡ, ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್‍ಬಾಸ್ ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದ್ದು ದೊಡ್ಡದು. ಒಂದೆರಡು ಹೆಸರುಗಳು ಹೊರಬಿದ್ದಿದ್ದವಾದರೂ, ಒಟ್ಟು 17 ಸ್ಪರ್ಧಿಗಳಲ್ಲಿ ಬಹಿರಂಗವಾದ ಸ್ಪರ್ಧಿಗಳ ವಿವರ 5ನ್ನೂ ಮುಟ್ಟಿರಲಿಲ್ಲ. ಈಗ ಬಿಗ್‍ಬಾಸ್ ಶುರುವಾಗಿದೆ. ಬಿಗ್‍ಬಾಸ್ ಮನೆ ಸೇರಿದವರ ಪಟ್ಟಿ ಈ ಬಾರಿ ನಿಜಕ್ಕೂ ಇಂಟ್ರೆಸ್ಟಿಂಗ್.
ಸಿಹಿಕಹಿ ಚಂದ್ರು - ನಟ, ನಿರ್ದೇಶಕ, ದಯಾಳ್ ಪದ್ಮನಾಭನ್ - ನಿರ್ದೇಶಕ, ನಿರ್ಮಾಪಕ, ಕಾರ್ತಿಕ್ ಜಯರಾಂ (ಜೆಕೆ) - ನಟ, ತೇಜಸ್ವಿನಿ ಪ್ರಕಾಶ್ - ನಟಿ, ಅಶಿತಾ, ಕೃಷಿ ತಾಪಂಡಾ, ಅನುಪಮಾ (ಅಕ್ಕ ಧಾರಾವಾಹಿ ಖ್ಯಾತಿ), ರ್ಯಾಪರ್ ಚಂದನ್ ಶೆಟ್ಟಿ, ಸ್ಟೇಜ್ ಆ್ಯಂಕರ್ ರಿಯಾಜ್ ಬಾಷಾ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಣ್ಣದ ಲೋಕದವರು. ಇನ್ನು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಇದ್ದಾರೆ.
ಜನಸಾಮಾನ್ಯರ ಕೋಟಾದಲ್ಲಿ ಮೇಘಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ, ಜಗನ್, ದಿವಾಕರ್, ಸುಮಾ ರಾಜ್‍ಕುಮಾರ್ ಬಿಗ್‍ಬಾಸ್ ಪ್ರವೇಶಿಸಿದ್ದಾರೆ.
ಇನ್ನು 100 ದಿನ.. 17 ಸ್ಪರ್ಧಿಗಳು.. 47 ಕ್ಯಾಮೆರಾಗಳು.. ಬಿಗ್‍ಬಾಸ್ ಮನೆಯಲ್ಲಿನ ಚಿತ್ರ ವಿಚಿತ್ರ ಕಥನಾವಳಿ.. ವಾರಕ್ಕೆರಡು ಬಾರಿ ಕಿಚ್ಚನ ಜೊತೆ.. ಮನರಂಜನೆ ಭರಪೂರ ಸಿದ್ಧವಾಗಲಿದೆ.