` ಒಳ್ಳೆ ಹುಡುಗ ಪ್ರಥಮ್ ಹಿಂಗೆಲ್ಲ ಆಡ್ತಾರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramachandra, pratham image
Pratham In Controversy Again

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ವಿವಾದದ ಮೂಲಕವೇ. ಎಂಎಲ್​ಎ ಚಿತ್ರದ ಸಹನಿರ್ದೇಶಕ ರಾಮಚಂದ್ರ, ಪ್ರಥಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಫೇಸ್​ಬುಕ್ ಲೈವ್​ನಲ್ಲಿ ಪ್ರತ್ಯಕ್ಷವಾದ ರಾಮಚಂದ್ರ, ಓಂ ಸಾಯಿ ಪ್ರಕಾಶ್ ಅವರ ಬಳಿ 9 ವರ್ಷದಿಂದ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕ. ಪ್ರಥಮ್ ಅಭಿನಯದ ಎಂ.ಎಲ್.ಎ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈ ಚಿತ್ರದ ನಿರ್ದೇಶಕ ಮೌರ್ಯ ಮಂಜುನಾಥ್.

mla_director_assistant_dire.jpgಪ್ರಥಮ್ ಚಿತ್ರೀಕರಣದಲ್ಲಿ ಇಷ್ಟ ಬಂದಂತೆ ಆಡ್ತಾರಂತೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಚಿತ್ರೀಕರಣ ಮಾಡುವಾಗ 8 ಟೇಕ್ ತೆಗೆದುಕೊಂಡೂ ಶಾಟ್ ಮುಗಿಸಲಿಲ್ಲವಂತೆ. ಮಧ್ಯೆ ಮಧ್ಯೆ ಶೂಟಿಂಗ್ ನೋಡಲು ಬಂದಿದ್ದವರ ಜೊತೆ ಸೆಲ್ಫಿ ತೆಗೆದುಕೊಂಡು ಕಾಲ ಕಳೆಯುತ್ತಿದ್ದರಂತೆ. ನಂತರ ನಿರ್ದೇಶಕರು ಕರೆದರೂ ಕೇಳಿಸಿಕೊಳ್ಳದೆ ಶೂಟಿಂಗ್ ಸ್ಪಾಟ್​ನಿಂದ ಎದ್ದು ಹೋದರಂತೆ. ಆಗ, ರಾಮಚಂದ್ರ,  ಪ್ರಥಮ್ ಅವರನ್ನು ಅಕ್ಷರಶಃ ಕೈ ಹಿಡಿದು ಎಳೆದು ತಂದು ಶೂಟಿಂಗ್ ಮಾಡಿಸಿದರಂತೆ. 

ಆದರೆ, ಅದಾದ ಮೇಲೆ  ಪ್ರಥಮ್  ನನ್ನನ್ನು ಬಾಯಿಗೆ ಬಂದಂತೆ ಬೈದರು. ಕೆಟ್ಟ ಕೆಟ್ಟ ಪದಗಳನ್ನೆಲ್ಲ ಬಳಸಿದರು. ನಟಿ ರೇಖಾ, ಕುರಿ ಪ್ರತಾಪ್ ಮೊದಲಾದವರು ಹೇಳಿದರೂ ಕೇಳದರೆ, ನನ್ನನ್ನು ಅವಮಾನಿಸಿದರು. ಕೊನೆಗೆ ನಾನು ತಂಡದಲ್ಲಿದ್ದರೆ, ಸಿನಿಮಾನೇ ಮಾಡಲ್ಲ ಎಂದು ಹಠ ಹಿಡಿದರು. ಕೊನೆಗೆ ಸಿನಿಮಾಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ನಾನೇ ಚಿತ್ರದಿಂದ ಹೊರಬಂದೆ ಎಂದಿದ್ದಾರೆ ರಾಮಚಂದ್ರ. 

‘ಪ್ರಥಮ್ ಒಳ್ಳೆ ಹುಡುಗ ಅಲ್ಲ. ಅವನಿಗೆ ಬೇಕಾದ ಚಪ್ಪಲಿ, ಬಟ್ಟೆ ಇಲ್ಲದಿದ್ದರೆ, ಅವನು ನಟಿಸೋದೇ ಇಲ್ಲ. ದಯವಿಟ್ಟು ಅವನಿಂದ ದೂರವಿರಿ ಎಂದಿದ್ದಾರೆ ರಾಮಚಂದ್ರ. ಅಲ್ಲದೆ ನಿರ್ದೇಶಕರು ಕೊಟ್ಟ ಡೈಲಾಗ್ ಹೇಳದೆ ಕಿರಿಕಿರಿ ಮಾಡುತ್ತಾನೆ. ದಯವಿಟ್ಟು ಇವನನ್ನ ಸಿನಿಮಾಗೆ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ ರಾಮಚಂದ್ರ.

ಇದಕ್ಕೆಲ್ಲ ಪ್ರಥಮ್ ಏನ್ ಹೇಳ್ತಾರೋ..?

Kurukshetra Celebrity Show Gallery

Rightbanner02_gimmick_inside

Nanna Prakara Movie Images