` ಸುದೀಪ್ ಮೆಚ್ಚಿದ ಜೋಗಿ ಪ್ರೇಮ್‍ರ ಆ ಗುಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain shooting image in chikkamangalur
Kiccha Sudeep, Prem Image

ಜೋಗಿ ಪ್ರೇಮ್ ನಿರ್ದೇಶನದಲ್ಲಿ ದಿ ವಿಲನ್ ಚಿತ್ರದಲ್ಲಿ ನಟಿಸುತ್ತಿರುವ ಸುದೀಪ್‍ಗೆ ಅವರ ಜೊತೆ ಕೆಲಸ ಮಾಡಿದ ಮೇಲೆ ತಾವು ಕೇಳಿದ್ದೇ ಬೇರೆ. ಇರುವ ಪ್ರೇಮ್ ಅವರೇ ಬೇರೆ ಎಂದು ಗೊತ್ತಾಗಿದೆಯಂತೆ. ಪ್ರೇಮ್ ಬಗ್ಗೆ ಅವರು ತುಂಬಾ ಬಿಲ್ಡಪ್ ಕೊಡ್ತಾರೆ. ಶೋ ಅಪ್ ಮಾಡ್ತಾರೆ ಅಂತಾ ಕೇಳಿದ್ದೆ. ಆದರೆ, ಅವರ ನಿರ್ದೇಶನದ  ಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ ಗೊತ್ತಾಯ್ತು. ಅವರು ತುಂಬಾ ಫ್ಯಾಷನೇಟ್. ಚಿತ್ರದ ಪ್ರತಿ ಫ್ರೇಂ ಕೂಡಾ ಹೀಗೇ ಬರಬೇಕು ಎಂದು ಬಯಸುತ್ತಾರೆ. ಅವರು ಬಯಸಿದ್ದು ಸಿಗುವವರೆಗೆ ಬಿಡುವುದೇ ಇಲ್ಲ ಎಂದು ಶಹಬ್ಬಾಸ್‍ಗಿರಿ ಕೊಟ್ಟಿದ್ದಾರೆ ಸುದೀಪ್.

ಪ್ರೇಮ್ ಸಿನಿಮಾ ಬಿಟ್ಟು ಬೇರೇನೂ ಯೋಚಿಸೋದಿಲ್ಲ. ಕುಂತಲ್ಲಿ ಕೂರಲ್ಲ. ನಿಂತಲ್ಲಿ ನಿಲ್ಲಲ್ಲ. ಯಾರೊಬ್ಬರಿಗೂ ಬಯ್ಯಲ್ಲ. ಆದರೆ, ತನಗೆ ಬೇಕಾದ ಅಷ್ಟೂ ಕೆಲಸವನ್ನು ಪ್ರೀತಿಯಿಂದಲೇ ಮಾಡಿಸಿಕೊಂಡುಬಿಡ್ತಾರೆ ಅಂತಾರೆ ಸುದೀಪ್. ಸೆಟ್‍ನಲ್ಲಿ ಎಷ್ಟೋ ಬಾರಿ ಸುದೀಪ್ ಅವರೇ ಬೈದು ಊಟ ಮಾಡಿಸಿದ್ದೂ ಇದೆಯಂತೆ.

ಇನ್ನು ಶಿವರಾಜ್ ಕುಮಾರ್ ಜೊತೆಗಿನ ಅನುಭವನ್ನೂ ಹಂಚಿಕೊಂಡಿದ್ದಾರೆ ಸುದೀಪ್. ಶಿವಣ್ಣ ಸೆಟ್‍ಗೆ ಯಾವಾಗ ಬರ್ತಾರೆ..ಯಾವಾಗ ಹೋಗ್ತಾರೆ ಗೊತ್ತೇ ಅಗಲ್ಲ. ಅಹಂ ಇಲ್ಲ. ಅವರ ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತೆ ಎಂದಿದ್ದಾರೆ ಸುದೀಪ್.

ಇನ್ನು ಚಿತ್ರದ ಕಥೆ, ಪಾತ್ರದ ಬಗ್ಗೆ ಸುದೀಪ್ ಏನನ್ನೂ ಬಾಯ್ಬಿಡಲ್ಲ. ನಂಗೇನೂ ಗೊತ್ತಿಲ್ಲ. ಪ್ರೇಮ್ ಏನ್ ಹೇಳ್ತಿದ್ದಾರೋ, ಅಷ್ಟನ್ನು ಮಾತ್ರ ಮಾಡ್ತಿದ್ದೇನೆ ಅಂತಾರೆ ಸುದೀಪ್. ಅಫ್‍ಕೋರ್ಸ್, ಸುದೀಪ್ ಏನೇ ಹೇಳಿದರೂ, ಕಥೆ ಮತ್ತು ಪಾತ್ರದ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ಸುದೀಪ್ ಸಿನಿಮಾ ಒಪ್ಪಿಕೊಳ್ಳಲ್ಲ ಎನ್ನುವುದು ಚಿತ್ರರಂಗದ ಪ್ರತಿಯೊಬ್ಬರಿಗೂ ಗೊತ್ತು.