ಸತ್ಯ ಹರಿಶ್ಚಂದ್ರ. ಶರಣ್ ಅಭಿನಯದ ಈ ಸಿನಿಮಾ ದೀಪಾವಳಿಗೆ ನಗೆ ಪಟಾಕಿ ಹಚ್ಚೋಕೆ ಬರ್ತಾ ಇದೆ. ಶರಣ್ ಚಿತ್ರ ಎಂದ ಮೇಲೆ ಕಾಮಿಡಿ ಇರಲಬೇಕು. ಈ ಚಿತ್ರದಲ್ಲಿ ಶರಣ್ ಪಾತ್ರದ ಹೆಸರು ಸತ್ಯ ಹರಿಶ್ಚಂದ್ರ. ಆದರೆ, ಹೇಳೋದೆಲ್ಲ ಸುಳ್ಳು. ಶರಣ್‍ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅದರಲ್ಲಿ ಒಬ್ಬರು ಭಾವನಾ ರಾವ್.
ಚಿತ್ರದ ಶೂಟಿಂಗ್ ಅನುಭವ ಹೇಳಿಕೊಂಡಿರೋ ಭಾವನಾ ರಾವ್, ಶರಣ್ ಕಾಮಿಡಿ ಟೈಮಿಂಗ್ ಅದ್ಭುತ ಎಂದಿದ್ದಾರೆ. ಶರಣ್ ಅವರ ಟೈಮಿಂಗ್‍ಗೆ ಸರಿಯಾಗಿ ನಾವು ರಿಯಾಕ್ಷನ್ ಕೊಡಬೇಕು. ಅದು ಬಹಳ ಕಷ್ಟವಾಗಿತ್ತು. ಶೂಟಿಂಗ್‍ನಲ್ಲಿ ಅದನ್ನು ಕಲಿತುಕೊಂಡೆ ಎಂದು ಅನುಭವ ಹಂಚಿಕೊಂಡಿದ್ದಾರೆ ಭಾವನಾ ರಾವ್.
ಅಳಿಸೋದು ಸುಲಭ..ನಗಿಸೋದು ಕಷ್ಟ ಅನ್ನೋದು ಭಾವನಾ ರಾವ್ ಅನುಭವದ ಮಾತು. ಆ ಕಷ್ಟವನ್ನು ದಯಾಳ್ ಪದ್ಮನಾಭನ್ ತಾಳ್ಮೆಯಿಂದ ಹೇಳಿಕೊಟ್ಟು ಸುಲಭವಾಗಿಸಿದರು ಎಂದಿದ್ದಾರೆ ಭಾವನಾ ರಾವ್.