ಶರಣ್. ಅಧ್ಯಕ್ಷ ನಂತರ ಅದೇಕೋ ಏನೋ.. ಶರಣ್‍ಗೆ ಬಿಗ್ ಹಿಟ್ ಎನ್ನುವುದು ಸಿಕ್ಕಿಲ್ಲ. ಹಾಗೆಂದು ಶರಣ್ ಚಿತ್ರಗಳು ಸೋತಿವೆ ಎನ್ನುವ ಹಾಗೂ ಇಲ್ಲ. ಒಂದು ಆ್ಯವರೇಜ್ ಮಟ್ಟಕ್ಕೆ ಮುಟ್ಟಿವೆ. ಶರಣ್ ಚಿತ್ರಗಳು ನಿರ್ಮಾಪಕರನ್ನು ನಷ್ಟಕ್ಕೆ ದೂಡಿಲ್ಲ ಎನ್ನುವುದು ಇನ್ನೊಂದು ಪ್ಲಸ್. ಆದರೆ, ಒಂದು ದೊಡ್ಡ ಹಿಟ್ ಸಿಕ್ಕಿಲ್ಲ ಎನ್ನುವ ಬೇಸರ ಶರಣ್‍ಗೂ ಇದೆ.
ಗೆಲುವಿನ ಸೂತ್ರ ಇದೇ ಎಂದು ಗೊತ್ತಿದ್ದರೆ, ನಾವೆಲ್ಲ ದೇವರಾಗಿಬಿಡುತ್ತಿದ್ದೆವು. ಪ್ರಯತ್ನವಷ್ಟೇ ನಮ್ಮದು. ಆ ಪ್ರಯತ್ನವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದಿದ್ದಾರೆ ಶರಣ್. ಹಿಂದಿನ ತಪ್ಪುಗಳ ಬಗ್ಗೆ ವಿಷಾದವಿಲ್ಲ ಎನ್ನವ ಶರಣ್‍ಗೆ ಜೈಲಲಿತಾ ಚಿತ್ರದ ಸ್ತ್ರೀ ಪಾತ್ರಕ್ಕೆ ಸಿಕ್ಕಿರುವ ಮೆಚ್ಚುಗೆ ಖುಷಿ ಕೊಟ್ಟಿದೆ.
ಈಗ ಶರಣ್ ಸತ್ಯ ಹರಿಶ್ಚಂದ್ರನನ್ನು ಎದುರು ನೋಡುತ್ತಿದ್ದಾರೆ. ಅದು ದೊಡ್ಡ ಮಟ್ಟದ ಹಿಟ್ ಆಗುತ್ತೆ ಎನ್ನುವ ನಂಬಿಕೆ ಶರಣ್‍ದು. ಕಾಮಿಡಿಯೇ ನನ್ನ ಟ್ರಂಪ್ ಕಾರ್ಡ್. ಅದನ್ನು ಬಿಟ್ಟಂತೂ ಸಿನಿಮಾ ಮಾಡುವುದಿಲ್ಲ. ಸತ್ಯ ಹರಿಶ್ಚಂದ್ರನಲ್ಲೂ ಕಾಮಿಡಿಗೆ ಕೊರತೆಯಿಲ್ಲ ಎನ್ನುತ್ತಾರೆ ಶರಣ್.
ಸತ್ಯ ಹರಿಶ್ಚಂದ್ರ, ಇದೇ ತಿಂಗಳು 20ಕ್ಕೆ ತೆರೆ ಕಾಣುತ್ತಿದೆ.