ದನಕಾಯೋನು. ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ. ಕನಕಪುರ ಶ್ರೀನಿವಾಸ್ ನಿರ್ಮಾಣದ ಆ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನವಿತ್ತು. ಆದರೆ, ಸಿನಿಮಾ ರಿಲೀಸ್ ಆಗಿ, ಲಾಭ ಮಾಡಿಕೊಂಡರೂ, ನಿರ್ಮಾಪಕ ಕನಕಪುರ ಶ್ರೀನಿವಾಸ್, ಯೋಗರಾಜ್ ಭಟ್ಟರಿಗೆ ಅವರಿಗೆ ಕೊಡಬೇಕಾದ ಸಂಭಾವನೆ ಕೊಡಲೇ ಇಲ್ಲ. ಫಿಲಂ ಚೇಂಬರ್ ಮೆಟ್ಟಿಲೇರಿ, ಹಲವು ಬಾರಿ ಸೂಚನೆ ಕೊಟ್ಟರೂ, ಶ್ರೀನಿವಾಸ್ ಪ್ರತಿ ಬಾರಿಯೂ ಮಾತಿಗೆ ತಪ್ಪಿದರು. ಕೊಟ್ಟಿದ್ದ ಚೆಕ್‍ಗಳು ಬೌನ್ಸ್ ಆದವು.
ಅದೇ ಕನಕಪುರ ಶ್ರೀನಿವಾಸ್ ನಿರ್ಮಾಣದ ಭರ್ಜರಿ ಚಿತ್ರದ ರಿಲೀಸ್ ವೇಳೆ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ ಕೊಟ್ಟಿದ್ದರು. ಆಗ ಮತ್ತೊಮ್ಮೆ ಫಿಲಂ ಚೇಂಬರ್ ಮೊರೆ ಹೋದ ಕನಕಪುರ ಶ್ರೀನಿವಾಸ್, ಸೆಪ್ಟೆಂಬರ್ ಅಂತ್ಯದೊಳಗೆ ಹಣವನ್ನು ಪೂರ್ತಿ ನೀಡುವುದಾಗಿ ಭರವಸೆ ಕೊಟ್ಟು, ಸಿನಿಮಾ ರಿಲೀಸ್ ಆಗುವಂತೆ ನೋಡಿಕೊಂಡಿದ್ದರು.
ಕನಕಪುರ ಶ್ರೀನಿವಾಸ್ ಅವರನ್ನು ನಂಬಿದ್ದಕ್ಕೆ ಈ ಬಾರಿಯೂ ಭರ್ಜರಿಯಾಗಿಯೇ ಕೈಕೊಟ್ಟಿದ್ದಾರೆ. ಭರ್ಜರಿ ಚಿತ್ರವೂ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಯೋಗರಾಜ್ ಭಟ್ಟರಿಗೆ ಇದುವರೆಗೆ ಬರಬೇಕಾದ ಸಂಭಾವನೆ ಬಂದೇ ಇಲ್ಲ. ದನಕಾಯೋನು ಚಿತ್ರ ನಿರ್ದೇಶಿಸಿ, ಸಾಕ್ಷಾತ್ತು ಪುಣ್ಯಕೋಟಿಯಂತೆಯೇ ಕಾಯುತ್ತಿದ್ದಾರೆ ಯೋಗರಾಜ್ ಭಟ್.
Related Articles :-
ದನಕಾಯೋನು ಮುಗುಳ್ನಕ್ಕಾಗ..