` ಅ.22ಕ್ಕೆ ಚಿರು-ಮೇಘನಾ ನಿಶ್ಚಿತಾರ್ಥ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
chiranjeevi sarja, meghana engagement
Chiranjeevi Sarja, Meghana Raj Image

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಡುವ ದಾರಿಯಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅಕ್ಟೋಬರ್ 22ಕ್ಕೆ ಚಿರು-ಮೇಘನಾ ಎಂಗೇಜ್​ಮೆಂಟ್ ನಿಶ್ಚಯವಾಗಿದೆ. ಅಂದು ಇಬ್ಬರೂ ಉಂಗುರ ಬದಲಿಸಿಕೊಳ್ಳಲಿದ್ದಾರೆ. ಆದರೆ, ಇಬ್ಬರ ನಿಶ್ಚಿತಾರ್ಥದ ವಿಚಾರವನ್ನು ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಕುಟುಂಬವಾಗಲಿ, ಸರ್ಜಾ ಕುಟುಂಬವಾಗಲಿ ಸ್ಪಷ್ಟಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ, ಅಕ್ಟೋಬರ್ 22ಕ್ಕೆ ನಿಶ್ಚಿತಾರ್ಥ ನಡೆಯುವುದಂತೂ ನಿಜ. 

ಚಿರಂಜೀವಿ ಸರ್ಜಾ ಇದುವರೆಗೆ 14 ಚಿತ್ರಗಳಲ್ಲಿ ನಟಿಸಿದ್ದರೆ, ಮೇಘನಾ ರಾಜ್ 39 ಚಿತ್ರಗಳಲ್ಲಿ ನಟಿಸಿದ್ದಾರೆ. ಮೇಘನಾ ಅವರ ಪ್ರತಿಭೆ ಬೇರೆ ಭಾಷೆಗಳಲ್ಲಿಯೂ ಸದ್ದು ಮಾಡಿದೆ. ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ಸುದ್ದಿ ಗಾಂಧಿನಗರಕ್ಕೆ ಹಳೆಯದೇನೂ ಅಲ್ಲ. ಆದರೆ, ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈಗಲೂ ಅಷ್ಟೆ.. ಖುದ್ದು ಚಿರಂಜೀವಿ ಸರ್ಜಾ, ನಿಶ್ಚಿತಾರ್ಥದ ಸುದ್ದಿ ನಿರಾಕರಿಸಿದ್ದಾರೆ. ಹಾಗೆಂದು, ಇಬ್ಬರ ಮಧ್ಯೆ ಏನೂ ಇಲ್ಲ ಎಂಬ ಮಾತನ್ನೂ ಹೇಳಿಲ್ಲ. ಚಿರು ಅವರ ಜಾಣ್ಮೆಯ ಉತ್ತರವೇ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ನೀಡಿದೆ.

Related Articles :-

ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery