ಕನ್ನಡದ ಯಶಸ್ವಿ ಜೋಡಿ ಯಾವುದು ಎಂದರೆ ಹತ್ತಾರು ಜೋಡಿಗಳು ಕಣ್ಣ ಮುಂದೆ ಬರುತ್ತವೆ. ಬೆಳ್ಳಿತೆರೆಯ ಯಶಸ್ವಿ ಅಣ್ಣತಂಗಿ ಯಾರು ಎಂದರೆ, ಥಟ್ಟಂತ ನೆನಪಿಗೆ ಬರೋದು ಶಿವಣ್ಣ-ರಾಧಿಕಾ ಜೋಡಿ.
ಈಗ ಇವರಿಬ್ಬರೂ ಮತ್ತೊಮ್ಮೆ ತೆರೆಯ ಮೇಲೆ ಅಣ್ಣ ತಂಗಿಯಾಗೋಕೆ ಮನಸ್ಸು ಮಾಡಿದ್ದಾರೆ. ಈ ಬಾರಿಯೂ ಅಷ್ಟೆ, ಕಥೆ ಸಿದ್ಧಪಡಿಸಿ ನಿರ್ದೇಶನಕ್ಕಿಳಿಯುತ್ತಿರುವುದು ಸಾಯಿಪ್ರಕಾಶ್. ನಿರ್ಮಾಪಕಿ ಸ್ವತಃ ರಾಧಿಕಾ ಕುಮಾರಸ್ವಾಮಿ. ರಾಧಿಕಾ ಕುಮಾರಸ್ವಾಮಿ ಬ್ಯಾನರ್‍ನಲ್ಲೇ ಸಿನಿಮಾ ಸಿದ್ಧವಾಗಲಿದೆಯಂತೆ.
ಆದರೆ, ಶಿವರಾಜ್ ಕುಮಾರ್ ಇನ್ನೂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಶಿವಣ್ಣ ಓಕೆ ಎಂದರೆ, ಮತ್ತೊಮ್ಮೆ ತೆರೆಯ ಮೇಲೆ ಅಣ್ಣತಂಗಿಯರ ದರ್ಶನ ಗ್ಯಾರಂಟಿ.