ರಾಜ್ ಬಿ ಶೆಟ್ಟಿ. ಇವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡೋಕೆ ಅಪ್ಪು ಉತ್ಸಾಹ ತೋರಿಸಿದ್ದಾರೆ. ಅವರ ಹೊಸ ಪಾರ್ವತಮ್ಮ ರಾಜ್‍ಕುಮಾರ್ (ಪಿಆರ್‍ಕೆ) ಬ್ಯಾನರ್ ಅಡಿಯಲ್ಲಿ 2ನೇ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆ 2ನೇ ಚಿತ್ರದ ಹೀರೋ ಆಗಿ ರಾಜ್ ಬಿ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆ ಇದೆ.
ರಾಜ್ ಬಿ ಶೆಟ್ಟಿ ಅಂದ್ರೆ ಯಾರಂತ ಗೊತ್ತಲ್ಲ. ಒಂದು ಮೊಟ್ಟೆಯ ಕಥೆಯ ಹೀರೋ. ರಾಧಾಕೃಷ್ಣ ಎಂಬುವವರು ನಿರ್ದೇಶಿಸಲಿರುವ ಚಿತ್ರದ ಕಥೆ ಪುನೀತ್‍ಗೆ ಇಷ್ಟವಾಗಿದೆ. ಆ ಕಥೆಗೆ ರಾಜ್ ಬಿ ಶೆಟ್ಟಿ ಸೂಕ್ತ ಆಯ್ಕೆ ಎನ್ನಿಸಿದೆ. ಪ್ರಕ್ರಿಯೆ ಶುರುವಾಗಿದೆ.
ಈಗಾಗಲೇ ಕವಲುದಾರಿ ಎಂಬ ಚಿತ್ರದಲ್ಲಿ ಯುವನಟ ರಿಷಿಗೆ ಅವಕಾಶ ನೀಡಿದ್ದ ಪುನೀತ್, 2ನೇ ಚಿತ್ರದಲ್ಲೂ ಹೊಸಬರಿಗೇ ಬಾಗಿಲು ತೆರೆದಿದ್ದಾರೆ. ಆದರೆ, 3ನೇ ಚಿತ್ರದಲ್ಲಿ ಸ್ವತಃ ಪುನೀತ್ ನಾಯಕರಾಗುವ ಸಾಧ್ಯತೆಗಳಿವೆ. ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಪುನೀತ್ ಓಕೆ ಎಂದಿದ್ದಾರೆ ಎನ್ನುವುದು ಸುದ್ದಿ. ಆಂಜನಿಪುತ್ರದ ನಂತರ ಆ ಚಿತ್ರ ಸೆಟ್ಟೇರಲಿದೆ.