ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ತೆರೆ ಮೇಲೆ ಕಾಣಿಸಿಕೊಂಡರೆ ಹೇಗಿರುತ್ತೆ..? ಅಭಿಮಾನಿಗಳು ಹಬ್ಬ ಮಾಡ್ತಾರೆ ಬಿಡಿ ಅಂತೀರಾ. ಅಂಥಾದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ, ಅದು ಬೆಳ್ಳಿತೆರೆಯಲ್ಲಿ ಅಲ್ಲ. ಕಿರುತೆರೆಯಲ್ಲಿ.
ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಷೋವೊಂದರಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ಆ ಷೋದ ಪ್ರೋಮೋ ಕೂಡಾ ಶೂಟಿಂಗ್ ಆಗಿದೆ. ಆದರೆ, ರಿಯಾಲಿಟಿ ಷೋನ ಕಾನ್ಸೆಪ್ಟ್‍ನ್ನು ಸಂಪೂರ್ಣ ಗುಟ್ಟಾಗಿಟ್ಟಿದ್ದಾರೆ.
ಕೆಲವೇ ದಿನಗಳಲ್ಲಿ ಪ್ರೋಮೋ ರಿಲೀಸ್ ಆಗಬಹುದು. ಅಂದಹಾಗೆ ಅದೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್‍ಬಾಸ್ ಶುರುವಾಗಲಿದ್ದು, ಅಲ್ಲಿ ಕಿಚ್ಚ ಇರುತ್ತಾರೆ.
ಅಂದ್ರೆ ಒಂದೇ ಚಾನೆಲ್‍ನಲ್ಲಿ ಎರಡು ರಿಯಾಲಿಟಿ ಷೋಗಳಿಗೆ ಒಂದರಲ್ಲಿ ಪುನೀತ್, ಇನ್ನೊಂದರಲ್ಲಿ ಸುದೀಪ್ ಇರುತ್ತಾರೆ. ಇಬ್ಬರು ಸ್ಟಾರ್‍ಗಳನ್ನು ಒಂದೇ ಚಾನೆಲ್‍ನಲ್ಲಿ ಸೇರಿಸುವ ಸಾಹಸವನ್ನು ಕಲರ್ಸ್ ಮಾಡಿದೆ. ಇನ್ನು ಕಾಯ್ತಾ ಇರಬೇಕು. ಅಷ್ಟೆ.