ಹಿಂದಿ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್, ರಾವಣನ ಪಾತ್ರ ಮಾಡಿದವರಲ್ಲೇ ದಿ ಬೆಸ್ಟ್ ಎಂಬ ಅಭಿಪ್ರಾಯ ಬಾಲಿವುಡ್ನಿಂದ ಹೊರಹೊಮ್ಮಿದೆ. ಇದಕ್ಕೆಜೆಕೆ ಖುಷಿಯಾಗಿದ್ದಾರೆ. ಆ ಖುಷಿಯನ್ನೂ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಜೆಕೆ, ಸ್ಯಾಂಡಲ್ವುಡ್ ನನ್ನನ್ನು ಪೌರಾಣಿಕ ಪಾತ್ರಕ್ಕೆ ತಿರಸ್ಕರಿಸಿತ್ತು ಎಂದೂ ಹೇಳಿಕೊಂಡಿದ್ದಾರೆ. ಆದರೆ, ಅದೇ ಪೌರಾಣಿಕ ಕಥೆಯಲ್ಲಿ ಮಿಂಚಿದ್ದು ಅವರಿಗೂ ಖುಷಿ ಕೊಟ್ಟಿದೆ.
ಆದರೆ, ಆ ಖುಷಿಯ ಮಧ್ಯೆ ಅವರು ಹೇಳಿರುವ ಇನ್ನೊಂದು ಮಾತು ವಿವಾದ ಸೃಷ್ಟಿಸಿದೆ. ನನಗೆ ಕೆರೆಯಲ್ಲಿ ಈಜುವುದಕ್ಕಿಂತ ಸಮುದ್ರದಲ್ಲಿ ಈಜುವುದೇ ಇಷ್ಟ ಎಂಬ ಅಭಿಪ್ರಾಯ ಅವರ ಸ್ಟೇಟಸ್ನಲ್ಲಿದೆ. ಹಾಗಾದರೆ, ಜೆಕೆ, ಕೆರೆ ಎಂದು ಹೇಳಿದ್ದು ಸ್ಯಾಂಡಲ್ವುಡ್ಗಾ..? ಬಾಲಿವುಡ್ ಸಮುದ್ರಾನಾ..? ಇದು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಅದರ ಜೊತೆ ಪೌರಾಣಿಕ ಚಿತ್ರದ ಪಾತ್ರಕ್ಕೆ ಜೆಕೆಯನ್ನು ತಿರಸ್ಕರಿಸಿದ್ದು ಯಾರು ಎಂಬ ಬಗ್ಗೆಯೂ ಪ್ರಶ್ನೆಗಳೇಳುತ್ತಿವೆ.
Related Articles :-