ರವಿ ಬಸ್ರೂರ್ ನಿರ್ದೇಶನದ 'ಕಟಕ' ಚಿತ್ರದ ಟ್ರೇಲರ್ ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ. ಶನಿವಾರ ಸಂಜೆ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಟ್ರೇಲರ್ ರಿಲೀಸ್ ಮಾಡಲಿರುವುದು ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್.
ಇಲ್ಲಿ ದಾಖಲೆ ಬರೆಯುತ್ತಿರುವುದು ಯಾವ ವಿಚಾರದಲ್ಲಿ ಗೊತ್ತಾ..? ಕಟಕ ಚಿತ್ರದ ಟ್ರೇಲರ್ ಏಕಕಾಲಕ್ಕೆ 13 ಭಾಷೆಗಳಲ್ಲಿ ರಿಲೀಸ್ ಅಗುತ್ತಿದೆ. ಕನ್ನಡ, ತುಳು, ಕೊಡವ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ 13 ಭಾಷೆಗಳಲ್ಲಿ ಕಟಕ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ಚಿತ್ರದ ಟ್ರೇಲರ್ ಅತೀ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Related Articles :-