ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ನಲ್ಲಿ ಒಂದು ಅಪಘಾತವವಾಯ್ತು. ಖ್ಯಾತ ಉದ್ಯಮಿ ಆದಿಕೇಶವುಲು ಅವರ ಮೊಮ್ಮಗ ವಿಷ್ಣು ಅವರಿದ್ದ ಕಾರು, ಓಮ್ನಿ ಕಾರ್ಗೆ ಡಿಕ್ಕಿ ಹೊಡೆದಿತ್ತು. ಆಗ ಕಾರ್ನಲ್ಲಿ ವಿಷ್ಣು ಅವರ ಜೊತೆಗೆ ಇಬ್ಬರು ಸಿನಿಮಾ ಸ್ಟಾರ್ಗಳಿದ್ದರು. ಅವರು ವಿಪರೀತ ಕುಡಿದಿದ್ದರು. ಹಾಗೂ ಡ್ರಗ್ಸ್ ನಶೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿದವು. ಕಾರ್ನಲ್ಲಿ 200 ಗ್ರಾಂ ಗಾಂಜಾ ಕೂಡಾ ಸಿಕ್ಕಿತ್ತು.
ಅಷ್ಟಾಗಿದ್ದೇ ತಡ, ಕೆಲವರು ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಹೆಸರು ಹೇಳಿದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಬ್ಬರೂ ನಟರು ತಾವು ಕಾರ್ನಲ್ಲಿ ಇರಲಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಷ್ಣು ಸ್ನೇಹಿತ ಹೌದು. ಆದರೆ, ಕಾರ್ನಲ್ಲಿ ನಾವಿರಲಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮಗೆ ಡ್ರಗ್ಸ್ ಚಟವೂ ಇಲ್ಲ. ನಮ್ಮ ಮರ್ಯಾದೆ ತೆಗೆಯಬೇಡಿ ಎಂದಿದ್ದಾರೆ. ಸುಮ್ಮ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸದಂತೆ ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.