ಡಾ. ರಾಜ್‌ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾದ ಎವರಗ್ರೀನ್ ಹಾಡು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ'. ಈ ಹಳೆಯ ಹಾಡು ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಹಾಟ್ ಫೇವರಿಟ್. ಹಾಡಿನ ಮ್ಯೂಸಿಕ್ ಶುರುವಾದೊಡನೆ ಹೆಜ್ಜೆ ಹಾಕುವವರಿಗೆ ಕಡಿಮೆಯಿಲ್ಲ. ಈಗ ಈ ಹಾಡು ಮತ್ತೊಮ್ಮೆ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಮಾಡರ್ನ್ ಸ್ವರೂಪದಲ್ಲಿ ಬಂದಿದೆ.
ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ 'ಕುಲದಲ್ಲಿ ಕೀಳ್ಯಾವುದೋ' ಹಾಡನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ವಿಡಿಯೋ ಸಾಂಗ್ನಲ್ಲಿ ಸತ್ಯ ಹರಿಶ್ಚಂದ್ರ ದೃಶ್ಯಗಳನ್ನು ಮರುಸೃಷ್ಟಿಸಲಾಗಿದೆ. ಹಾಡಿನ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿರುವುದು ವಿಜಯ್ ಪ್ರಕಾಶ್ ಅವರ ಧ್ವನಿ. ಅರ್ಜುನ್ ಜನ್ಯ ಮೂಲ ಸಂಗೀತದಲ್ಲಿ ತುಂಬಾ ಬದಲಾವಣೆ ಮಾಡಿಲ್ಲ. ಬಿಟ್ಸ್ಗಳಷ್ಟೇ ಹೊಸದು. ಶರಣ್ ಅವರ ಎನರ್ಜಿ ಖುಷಿ ಕೊಡುತ್ತೆ. ದಯಾಳ್ ಪದ್ಮನಾಭ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.