ತಾರಕ್ ಚಿತ್ರ ರಿಲೀಸ್ಗೆ ಹತ್ತಿರವಾಗುತ್ತಿದ್ದಂತೆ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಅಭಿಮಾನಿಗಳಿಗೆ ಆ ಕುತೂಹಲ ಡಬಲ್ ಆಗಿದೆ. ಚಿತ್ರದಲ್ಲಿ ದರ್ಶನ್ ವಿದೇಶಿ ಹುಡುಗ. ಅಂದರೆ, ಭಾರತದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಪಾತ್ರ. ಚಿತ್ರದ ಕಥೆಯೂ ಅದೇ. ವಿದೇಶದಲ್ಲಿ ನೆಲೆಸಿರುವವರ ಸಂಭ್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತಾದದ್ದು.
ಹಾಗಂತ ಸಿನಿಮಾ ಪೂರ್ತಿ ಅಲ್ಲಿಯೇ ಇರಲ್ಲ. ಸ್ವದೇಶಕ್ಕೆ ಬರುತ್ತೆ. ಹೀಗಾಗಿ ದರ್ಶನ್ಗೆ ಚಿತ್ರದಲ್ಲಿ ಎರಡುಮೂರು ಗೆಟಪ್ಗಳಿವೆ. ಸ್ವದೇಶಕ್ಕೆ ಬರುವ ನಾಯಕ, ಆತನ ತಾತ, ಮತ್ತವರ ಕುಟುಂಬದ ಜೊತೆ ದರ್ಶನ್ ಜರ್ನಿಯೇ ಸಿನಿಮಾ ಸ್ಟೋರಿ. ದರ್ಶನ್ ಕೇರ್ಟೇಕರ್ಗಳಾಗಿ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ.
ದರ್ಶನ್ ಮಾಸ್ ಹೀರೋ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಮಾಡದ ರೀತಿಯಲ್ಲಿ ಫೈಟ್ಸ್, ಡೈಲಾಗ್ಸ್ ಇವೆ. ಹಾಗೆಂದು ಸಂಪೂರ್ಣವಾಗಿ ಇದು ರೆಗ್ಯುಲರ್ ದರ್ಶನ್ ಸಿನಿಮಾ ಅಲ್ಲ. ಮಿಲನ ಪ್ರಕಾಶ್ ಅವರ ಫ್ಯಾಮಿಲಿ ಟಚ್ ಕೂಡಾ ಚಿತ್ರದಲ್ಲಿದೆ. ಹೀಗಾಗಿ ತಾರಕ್ ರಸಗವಳವಾಗುವುದು ಗ್ಯಾರಂಟಿ.
Related Articles :-
ತಾರಕ್ : ಬಾವ ಬಾಮೈದರೇ ನಿರ್ಮಾಪಕ, ನಿರ್ದೇಶಕ
ಶಾನ್ವಿಗೇಕೆ ಪದೇ ಪದೇ ದೆವ್ವ ಹಿಡಿಯುತ್ತೆ..?
ದರ್ಶನ್ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?
ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ