Print 
darshan, director naganna

User Rating: 5 / 5

Star activeStar activeStar activeStar activeStar active
 
darshan wishes nagnna's daughter
Darshan, Naganna Image

ನಿದೇಶಕ ನಾಗಣ್ಣ, ಈಗ ಕರುನಾಡಿನ ಐತಿಹಾಸಿಕ ಚಿತ್ರ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ನಟ ದರ್ಶನ್ ದುರ್ಯೋಧನನಾಗಿ ನಟಿಸುತ್ತಿರುವ ಚಿತ್ರದಲ್ಲಿ ಕನ್ನಡ, ತೆಲುಗು, ತಮಿಳು, ಬಾಲಿವುಡ್‍ನ ದೊಡ್ಡ ದೊಡ್ಡ ಕಲಾವಿದರ ದಂಡೇ ಇದೆ. ಹೀಗಾಗಿ ನಾಗಣ್ಣನವರಿಗೆ ಪುರುಸೊತ್ತೇ ಇಲ್ಲ. 

ಇದರ ಮಧ್ಯೆ ನಾಗಣ್ಣನವರ ಮಗಳ ಬರ್ತ್‍ಡೇ ಬಂದುಬಿಟ್ಟಿದೆ. ಅವರ ಮಗಳೂ ಇರೋದು ವಿದೇಶದಲ್ಲಿ. ಅವರಿಗೊಂದು ಸರ್‍ಪ್ರೈಸ್ ಕೊಡಬೇಕು ಎಂದು ದರ್ಶನ್ ಮತ್ತು ನಾಗಣ್ಣ ಶುಭಾಶಯ ಕೋರಿ ಒಂದು ವಿಡಿಯೋ ಮಾಡಿ ಕಳಿಸಿದರಂತೆ. ಆ ವಿಡಿಯೋ ಸಂದೇಶಕ್ಕೆ ನಾಗಣ್ಣನವರ ಮಗಳು ಎಷ್ಟು ಖುಷಿಯಾದರೆಂದರೆ, ಒಂದು ಸುದೀರ್ಘ ಪತ್ರವನ್ನೇ ಬರೆದು ಧನ್ಯವಾದ ಹೇಳಿದರಂತೆ.

ನಮ್ಮವರನ್ನು ಬಿಟ್ಟು ದೂರದಲ್ಲಿರುವವರಿಗೆ ಇಂತಹ ಸಣ್ಣ ಪುಟ್ಟ ಸಂತೋಷಗಳು ದೊಡ್ಡ ಸಂಭ್ರಮವನ್ನೇ ತರುತ್ತವೆ. ಇಂತಹ ಚಿಕ್ಕ ಚಿಕ್ಕ ಘಟನೆಗಳನ್ನೂ ತಾರಕ್‍ನಲ್ಲಿ ತೋರಿಸಲಾಗಿದೆಯಂತೆ.