ತಾರಕ್‍ನಲ್ಲಿ ಡೈನಮಿಕ್ ಸ್ಟಾರ್ ದೇವರಾಜ್ ದರ್ಶನ್‍ಗೆ ಅಜ್ಜನಾಗಿ ನಟಿಸುತ್ತಿದ್ದಾರೆ. ದೇವರಾಜ್ ಅವರ ಅನುಭವಕ್ಕೆ ಹೋಲಿಸಿದರೆ, ಆ ಪಾತ್ರ ಅವರಿಗೆ ಸವಾಲು ಎನಿಸಲು ಸಾಧ್ಯವಿಲ್ಲ. ಅದರಲ್ಲೂ ದೇವರಾಜ್ ಮೂಲತಃ ರಂಗಭೂಮಿ ಕಲಾವಿದರು. ಹೀಗಿದ್ದರೂ ದೇವರಾಜ್ ಪಾತ್ರದ ವಿವರ ಹೇಳುತ್ತಿದ್ದಂತೆ ಒಪ್ಪಿಕೊಳ್ಳಲಿಲ್ಲವಂತೆ.
ಆದರೆ, ದೇವರಾಜ್‍ಗೆ ಪಾತ್ರ ಮತ್ತು ಕಥೆ ಇಷ್ಟವಾಗಿತ್ತು. ಹೀಗಾಗಿ ಚಿತ್ರದಲ್ಲಿ ನಟಿಸುವ ಮುನ್ನ ಅವರೊಂದು ಷರತ್ತು ಹಾಕಿದರು. ಏನೆಂದರೆ, ಚಿತ್ರದಲ್ಲಿ ತಾನು ಹೇಗೆ ಕಾಣುತ್ತೇನೆ ಅನ್ನೋದನ್ನು ಮೇಕಪ್ ಸಮೇತ ಟೆಸ್ಟ್ ಮಾಡಬೇಕು. ಅದನ್ನು ನೋಡಿ ಅದು ಇಷ್ಟವಾದರೆ ಮಾತ್ರ ನಾನು ನಟಿಸುತ್ತೇನೆ ಎಂದರು.
ಕೊನೆಗೆ ತಾರಕ್‍ನಲ್ಲಿನ ಅವರ ಪಾತ್ರದ ಸಂಪೂರ್ಣ ಲುಕ್‍ನ್ನು ನೋಡಿ, ಸಮಾಧಾನವಾದ ಮೇಲೇ ದೇವರಾಜ್ ನಟಿಸಲು ಒಪ್ಪಿಕೊಂಡಿದ್ದು. ಈಗ ತಾರಕ್ ರಿಲೀಸಾಗುತ್ತಿದೆ. ನಿರ್ದೇಶಕ ಮಿಲನ ಪ್ರಕಾಶ್ ಆ ಅನುಭವವನ್ನು ಹಂಚಿಕೊಂಡಿದ್ದಾರೆ.