ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಹೆಸರಿನಲ್ಲಿ ಹಲವಾರು ಟ್ವಿಟ್ಟರ್ ಖಾತೆಗಳಿವೆ. ಆ ಟ್ವಿಟರ್ ಖಾತೆಯಲ್ಲಿ ಅಭಿಷೇಕ್‌ಗೆ ಸಂಬಂಧಿಸಿದಂತೆ ಫೋಟೋಗಳು, ಸುದ್ದಿ ಅದೂ ಇದೂ ಹಾಕುತ್ತಿರುತ್ತಾರೆ. ಅದನ್ನು ಬಹಳಷ್ಟು ಜನ ಅಂಬರೀಷ್ ಅವರ ಪುತ್ರನದ್ದೇ ಎಂದುಕೊಂಡಿದ್ದರು. ಚಿತ್ರರಂಗ ಹಾಗೂ ಮಾಧ್ಯಮ ಲೋಕದ ಹಲವರು ಆ ಖಾತೆಯನ್ನು ಫಾಲೋ ಮಾಡುತ್ತಿದ್ದರು. ಆದರೆ, ಈಗ ಟ್ವಿಟ್ಟರ್ ಖಾತೆಯೇ ನಕಲಿ ಎನ್ನುವುದು ಗೊತ್ತಾಗಿದೆ. ಅದು ನಕಲಿ ಎಂದು ಬಹಿರಂಗಪಡಿಸಿರುವುದು ಸ್ವತಃ ಸುಮಲತಾ ಅಂಬರೀಷ್.
ಅಭಿಷೇಕ್ ಅಂಬರೀಷ್ ಪ್ರೊಫೈಲ್ ಫೋಟೋ ಹಾಕಿಕೊಂಡಿರುವ ಟ್ವಿಟ್ಟರ್ ಖಾತೆಗಳನ್ನು ನಿರ್ಲಕ್ಷಿಸಿ. ಯಾಕೆಂದರೆ ಅಭಿಷೇಕ್ ಯಾವುದೇ ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ. ಇದು ಸುಮಲತಾ ಮಾಡಿರುವ ಟ್ವೀಟ್. ಟ್ವಿಟ್ಟರ್ನಲ್ಲೇ ಇಲ್ಲದ ಅಭಿಷೇಕ್ ಹೆಸರಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ಯಾರು..? ಅದರಲ್ಲಿ ಅಪ್ಡೇಟ್ ಮಾಡುತ್ತಿದ್ದವರು ಯಾರು.? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.