ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಿಕಿ ಕೇಜ್, ತಾವು ಕಳೆದುಕೊಂಡಿದ್ದ ನಾಯಿ ಕೊನೆಗೂ ಸಿಕ್ಕ ಸಂಭ್ರಮದಲ್ಲಿದ್ದಾರೆ.ತಮ್ಮ ಮುದ್ದಿನ ಮಗ ಹುಚೀ ಕಳೆದು ಹೋಗಿದ್ದಾನೆ . ಮನೆಯಲ್ಲಿದ್ದ ಒಬ್ಬನೇ ಮಗನನ್ನ ಕಳೆದುಕೊಂಡು ಬೇಸರದಲ್ಲಿದ್ದೇನೆ. ನಮ್ಮ ಮುದ್ದಿನ ಕಂದನನ್ನ ಯಾರಾದ್ರೂ ಹುಡುಕಿಕೊಟ್ರೆ ಅವರಿಗೆ ಒಂದುಲಕ್ಷ ಬಹುಮಾನ ಎಂದು ಘೋಷಿದಿದ್ದರು ರಿಕ್ಕಿ ಕೇಜ್. ಪೋಲೀಸರಿಗೂ ದೂರು ಕೊಟ್ಟಿದ್ದರು. ಚಿತ್ರಲೋಕದಲ್ಲೂ ಅದು ವರದಿಯಾಗಿತ್ತು.
ತಮ್ಮ ನಾಯಿಯ ಹೆಸರು ಹುಚೀ. ಗೋಲ್ಡನ್ ರಿಟ್ರೀವರ್ ಜಾತಿಗೆ ಸೇರಿದ ಫ್ರೆಂಡ್ಲೀ ನಾಯಿ. ನಮ್ಮ ಹುಚೀ ಬಲ ತೊಡೆಯ ಮೇಲೊಂದು ಗಾಯವಾಗಿದೆ ಎಂದೆಲ್ಲ ವಿವರ ನೀಡಿದ್ದರು. ತಮ್ಮ ಮನೆಯ ಅಡ್ರೆಸ್, ಫೋನ್ನಂಬರ್ ಎಲ್ಲವನ್ನೂ ಹಾಕಿದ್ದರು.
ಖುಷಿಯ ವಿಚಾರ ಅಂದ್ರೆ, ಇದನ್ನು ನೋಡಿದ ಮಹಿಳೆಯೊಬ್ಬರು ರಿಕ್ಕಿ ಅವರನ್ನು ಸಂಪರ್ಕಿಸಿ, ಹುಚೀಯನ್ನು ಅವರಿಗೆ ತಂದು ಒಪ್ಪಿಸಿದ್ದಾರೆ. ಅಷ್ಟೇ ಅಲ್ಲ, ರಿಕ್ಕಿ ಘೋಷಿಸಿದ್ದ ಬಹುಮಾನದ ಹಣವನ್ನೂ ಬೇಡ ಎಂದಿದ್ದಾರೆ. ಒಟ್ಟಿನಲ್ಲಿ ರಿಕ್ಕಿಕೇಜ್ ಅವರು ಕಳೆದುಕೊಂಡಿದ್ದ ನಾಯಿ ಸಿಕ್ಕ ಖುಷಿಯಲ್ಲಿದ್ದಾರೆ.
Related Articles :-