` ಡ್ರಾಮಾ ಜ್ಯೂನಿಯರ್ಸ್​ನಿಂದ ಟಿ.ಎನ್.ಸೀತಾರಾಮ್ ಹೊರಕ್ಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
drama juniors 2
TN Seetharam, Lakshmi, Vijay Raghavendra

ಡ್ರಾಮಾ ಜ್ಯೂನಿಯರ್ಸ್. ಝೀ ಕನ್ನಡದ ಈ ರಿಯಾಲಿಟಿ ಶೋ, ಈಗ ಕರ್ನಾಟಕದ ಮನೆಮಾತು. ಪುಟಾಣಿಗಳ ಅದ್ಭುತ ಪ್ರತಿಭೆ ಹಾಗೂ ಜಡ್ಜ್​ಗಳಾಗಿದ್ದ ಟಿ.ಎನ್. ಸೀತಾರಾಮ್, ವಿಜಯ್ ರಾಘವೇಂದ್ರ ಹಾಗೂ ಲಕ್ಷ್ಮಿ, ನಿರೂಪಕ ಆನಂದ್​​ಗೆ ಹೊಸ ಇಮೇಜ್ ಕೊಟ್ಟ ಕಾರ್ಯಕ್ರಮ. ಈಗ ಅದರ ಎರಡನೇ ಸೀಸನ್ ನಡೆಯುತ್ತಿದೆ. 

ಆದರೆ, ವಿಷಯ ಅದಲ್ಲ. ಡ್ರಾಮಾ ಜ್ಯೂನಿಯರ್ಸ್​ನಿಂದ ಟಿ.ಎನ್. ಸೀತಾರಾಮ್ ಹೊರನಡೆದಿದ್ದಾರೆ. ಅದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಅವರು ಹೊಸ ಸಿನಿಮಾವೊಂದಕ್ಕೆ ಸಿದ್ಧರಾಗುತ್ತಿದ್ದು, ಅದಕ್ಕಾಗಿ ವಿದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಅಲ್ಲದೆ ವಿಧಾನಮಂಡಲದ ಸಾಕ್ಷ್ಯಚಿತ್ರಗಳ ಜವಾಬ್ದಾರಿ ಕೂಡಾ ಹೆಗಲೇರಿದೆ. ಇದರ ಮಧ್ಯೆ ವೆಬ್​ ಚಾನೆಲ್​ವೊಂದನ್ನು ಆರಂಭಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ ಟಿ.ಎನ್. ಸೀತಾರಾಮ್. ಇದೆಲ್ಲವನ್ನೂ ಹೇಳಿಕೊಂಡಿರುವ ಸೀತಾರಾಮ್, ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಹೊರಹೋಗುತ್ತಿದ್ದೇನೆ. ಅವಕಾಶ ನೀಡಿದ ಝೀ ಕನ್ನಡದ ರಾಘವೇಂದ್ರ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಪುಟ್ಟ ಪುಟ್ಟ ಮಕ್ಕಳಿಂದ, ಡ್ರಾಮಾ ಜ್ಯೂನಿಯರ್ಸ್ ತಂಡದವರಿಂದ ಹಾಗೂ ಲಕ್ಷ್ಮಿ, ಆನಂದ್, ಆನಂದ್ ಅವರಿಂದ ಬಹಳಷ್ಟು ವಿಷಯ ಕಲಿತಿದ್ದೇನೆ. ಅದರಲ್ಲೂ ಕಾರ್ಯಕ್ರಮದಲ್ಲಿ ಮಕ್ಕಳ ಮುಗ್ಧತೆ, ಸಂಭ್ರಮಗಳು ನನ್ನ ಬಾಲ್ಯವನ್ನು ಮತ್ತೆ ಮರಳಿ ತಂದುಕೊಟ್ಟವು. ನನ್ನ ಬೇಸರ ಒಂಟಿತನಗಳೆಲ್ಲಾ ಮ್ಯಾಜಿಕ್ ನಂತೆ ಮಾಯವಾದವು. ಜೀ ತಂಡದವರು ಕೂಡ ಅದ್ಭುತ ನಾಟಕಗಳನ್ನು ಮಾಡಿಸಿದರು ಎಂದು ಇಡೀ ತಂಡವನ್ನು ಕೊಂಡಾಡಿದ್ದಾರೆ. ಏನೇ ಇರಲಿ..ಡ್ಯಾಮಾ ಜ್ಯೂನಿಯರ್ಸ್​ನ ಮುಂದಿನ ಎಪಿಸೋಡುಗಳಲ್ಲಿ ಟಿ.ಎನ್. ಸೀತಾರಾಮ್ ಇರುವುದಿಲ್ಲ ಎನ್ನುವುದಂತೂ ಸತ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery