` ಹುಟ್ಟು ಗುಜರಾತಿ..ಆದರೀಗ ಕನ್ನಡತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
akanksha now kannadathi
Akanksha Image

ಆಕಾಂಕ್ಷಾ. ಈಕೆ ಕ್ರ್ಯಾಕ್ ಚಿತ್ರದ ಹೀರೋಯಿನ್. ಈಕೆಯ ಮಾತನ್ನು ಕೇಳಿದವರ್ಯಾರೂ ಈಕೆ ಕನ್ನಡತಿ ಅಲ್ಲ ಎಂದು ಹೇಳೋಕೆ ಸಾಧ್ಯವೇ ಇಲ್ಲ. ಆರ್‍ಎಕ್ಸ್ ಸೂರಿ ಚಿತ್ರದಿಂದ ಪರಿಚಯವಾದ ಆಕಾಂಕ್ಷಾಗೆ ಕ್ರ್ಯಾಕ್ 3ನೇ ಚಿತ್ರ. ಈ ಚಿತ್ರಕ್ಕೆ ಡಬ್ ಮಾಡಿರುವುದೂ ಕೂಡಾ ಇವರೇ.

ಈಕೆ ಮೂಲತಃ ಗುಜರಾತಿ. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲ ಗುಜರಾತಿ ಭಾಷೆಯಲ್ಲಿ. ಈಕೆ ಬೆಂಗಳೂರಿಗೆ ಬಂದಿದ್ದು 6 ವರ್ಷಗಳ ಹಿಂದೆ. ಏರ್ ಹೋಸ್ಟೆಸ್ ಆಗಿ ವೃತ್ತಿ ಬದುಕು ಆರಂಭಿಸಿದ ಆಕಾಂಕ್ಷಾಗೆ, ಕೆಲವೇ ದಿನಗಳಲ್ಲಿ ಅದು ಬೋರ್ ಹೊಡೆಯಲಾರಂಭಿಸಿತು. ಸದಾ ಸುತ್ತುತ್ತಲೇ ಇರುವ ವಿಮಾನದಲ್ಲಿ, ಪ್ರಯಾಣಿಕರ ಆಗುಹೋಗುಗಳಿಗೆ ಸ್ಪಂದಿಸುವ ಕೆಲಸ, ನಿದ್ರೆಯಿಲ್ಲ. ವಿಶ್ರಾಂತಿಯಿಲ್ಲ. ಸುತ್ತಾಡಲೂ ಸಾಧ್ಯವಿಲ್ಲ. ಹೀಗಾಗಿ ಕೆಲವೇ ತಿಂಗಳಲ್ಲಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು. 

ಈ ಮಧ್ಯೆ ಆರ್‍ಎಕ್ಸ್ ಸೂರಿ ಚಿತ್ರಕ್ಕೆ ಅಡಿಷನ್ ನಡೆಯುತ್ತಿದೆ ಎಂದು ಗೊತ್ತಾಯಿತು. ಗೆಳೆಯರ ಒತ್ತಾಯದ ಮೇರೆಗೆ ಅಡಿಷನ್‍ಗೆ ಹೋದ ಆಕಾಂಕ್ಷಾ ನಾಯಕಿಯಾಗಿ ಸೆಲೆಕ್ಟ್ ಆಗಿಬಿಟ್ಟರು. ಕ್ರ್ಯಾಕ್ 3ನೇ ಚಿತ್ರ. ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಕನ್ನಡ ಕಲಿಯಲೇಬೇಕು ಎಂದು ಹಠಕ್ಕೆ ಬಿದ್ದ ಆಕಾಂಕ್ಷಾ, ಈಗ ಕನ್ನಡದಲ್ಲಿ ಮಾತನಾಡುವುದಷ್ಟೇ ಅಲ್ಲ, ಓದುವುದು ಹಾಗೂ ಬರೆಯುವುದನ್ನೂ ಕಲಿತುಬಿಟ್ಟಿದ್ದಾರೆ. ಕ್ರ್ಯಾಕ್ ಚಿತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಿದ್ದಾರೆ. 

ಕರ್ನಾಟಕದಲ್ಲಿಯೇ ಹುಟ್ಟಿ, ಬೆಳೆದು, ಇಲ್ಲಿಯೇ ಬದುಕು ಕಟ್ಟಿಕೊಂಡ ಎಷ್ಟೋ ಜನ ಕನ್ನಡದಲ್ಲಿ ಮಾತನಾಡಲ್ಲ. ಕನ್ನಡ ಬರುತ್ತಿದ್ದರೂ, ಪುಂಖಾನುಪುಂಖವಾಗಿ ಇಂಗ್ಲಿಷ್‍ನಲ್ಲೇ ಅಣಿಮುತ್ತು ಉದುರಿಸುತ್ತಾರೆ. ಕಾನ್ವೆಂಟುಗಳ ಮಾತನ್ನಂತೂ ಕೇಳೋದೇ ಬೇಡ. ಕನ್ನಡದಲ್ಲಿ ಮಾತನಾಡಿದರೇ ದಂಡ ಹಾಕುವ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿದ್ದುಕೊಂಡೂ ಕನ್ನಡ ಬರಲ್ಲ ಎಂದು ಹೇಳುವುದೇ ಹೆಮ್ಮೆಯ ವಿಚಾರವಾಗಿರುವಾಗ ಗುಜರಾತಿನಲ್ಲಿ ಹುಟ್ಟಿ ಬೆಳೆದ ಆಕಾಂಕ್ಷಾ, ಅಪ್ಪಟ ಕನ್ನಡತಿಯಾಗಿರುವುದು ಅಭಿನಂದಿಸಬೇಕಾದ ವಿಚಾರ.

ಸದ್ಯಕ್ಕೆ ಆಕಾಂಕ್ಷಾ ಬದ್ರಿ ವೆಡ್ಸ್ ಮಧುಮತಿ ಚಿತ್ರವನ್ನು ಪೂರೈಸಿದ್ದಾರೆ. ಕರ್ವ-2, ಲಂಬೋದರ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. 

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery