` ವಿಕ್ರಂವೇದ ರೀಮೇಕ್‍ನಲ್ಲಿ ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vikram veda image
Vikram Veda Movie Image

ವಿಕ್ರಂವೇದ, ಇತ್ತೀಚೆಗೆ ತಮಿಳುನಾಡು ಚಿತ್ರರಂಗದಲ್ಲಿ ಹೊಸ ಅಲೆಯೆಬ್ಬಿಸಿದ ಚಿತ್ರ. ಬಾಕ್ಸಾಫೀಸ್‍ನಲ್ಲಷ್ಟೇ ಅಲ್ಲ, ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದ ಚಿತ್ರ. ಆ ಚಿತ್ರವನ್ನು ರೀಮೇಕ್ ಮಾಡಲು ನಿರ್ಮಾಪಕ ಸಿ.ಆರ್. ಮನೋಹರ್ ಮುಂದಾಗಿದ್ದಾರೆ. ಚಿತ್ರದ ರೀಮೇಕ್ ರೈಟ್ಸ್ ಪಡೆಯಲು ವಿಕ್ರಂವೇದ ನಿಮಾಪಕರನ್ನು ಸಂಪರ್ಕಿಸಿದ್ದಾರೆ ಮನೋ

ಮನೋಹರ್ ಮನಸ್ಸಿನಲ್ಲಿರುವುದು ಸುದೀಪ್. ಮಾಧವನ್ ಮತ್ತು ವಿಜಯ್ ಸೇತುಪತಿ ನಟಿಸಿದ್ದ ಚಿತ್ರದಲ್ಲಿ ಸುದೀಪ್ ಯಾವ ಪಾತ್ರಕ್ಕೆ ಸೂಟ್ ಆಗುತ್ತಾರೆ ಎನ್ನುವದನ್ನೂ ಮನೋಹರ್ ಯೋಚಿಸಿಲ್ಲವಂತೆ. ಒಟ್ಟಿನಲ್ಲಿ ಸುದೀಪ್ ಅವರನ್ನಿಟ್ಟುಕೊಂಡು, ಆ ಚಿತ್ರವನ್ನು ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದಾರೆ.

ಅತ್ತ, ಚಿತ್ರದ ಮೂಲ ನಿರ್ಮಾಪಕರೂ ಕೂಡಾ, ಚಿತ್ರವನ್ನು ತಾವೇ ಏಕೆ ರೀಮೇಕ್ ಮಾಡಬಾರದು ಎಂದು ಯೋಚಿಸುತ್ತಿದ್ದಾರೆ. ಏನೇ ಆದರೂ, ವಿಕ್ರಂವೇದ ಕನ್ನಡಕ್ಕೆ ಬರುವುದು ಹೆಚ್ಚೂ ಕಡಿಮೆ ಪಕ್ಕಾ

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery