` Rohit Padaki Upset With Censor Behavior - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rohith padaki's dayavittu gamanisi
Rohit Padaki upset with Censor Behavior

Rohit Padaki who is turning director with Dayavittu Gamanisi is upset with the behavior of the CBFC officers. After obtaining the certificate for his film today he has burst out at the insensitive and rude behavior of the Censor Officer who did not treat the producers and director with courtesy.

In his online post he has said in Kannada "ಪ್ರೀತಿಯ ಸೆನ್ಸಾರ್ ಮಂಡಳಿ,

ನಾನು ಶಾಲಾ ಕಾಲೇಜಿನ ಸರ್ಟಿಫಿಕೇಟಿಗೆ ಹೆಚ್ಚು ಮಹತ್ವ ಕೊಟ್ಟವನಲ್ಲ, ಅದು ನನ್ನ ಬುದ್ಧಿ ಮಟ್ಟವನ್ನು ಅಳಿಯೋಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದೆ. ಈಗಲೂ ಹಾಗೆಯೇ. ನನ್ನ ಕನಸಿಗೆ, ನಾ ಕಟ್ಟಿದ ಪ್ರಪಂಚಕ್ಕೆ ಸರ್ಟಿಫಿಕೇಟ್ ಕೊಡೋಕೆ ಜನರಿದ್ದಾರೆ, ಅದಕ್ಕೆ ಅವ್ರು ಕಾಸು ಕೊಟ್ಟಿರುತ್ತಾರೆ. ಇರಲಿ, ನೀವು ನಮಗೆ ಕೊಟ್ಟಿರೋ ಸರ್ಟಿಫಿಕೇಟ್ ಸಂತೋಷದಿಂದ ಪಡ್ಕೊಳ್ತೀನಿ. ಆದ್ರೆ...

ನಮ್ಮ ಪ್ರೊಡ್ಯೂಸರ್ Krishna Sarthak ಕೋಟಿಗಟ್ಟಲೆ ಹಣ ಹೂಡಿ ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ, ನಿಮ್ಮ ಮುಂದೆ ಕೈ ಕಟ್ಟಿ ನಿಂತುಕೊಂಡು ಅವರೇಕೆ ಗಿಂಜಾಡಬೇಕು? ನಾ ಕಂಡ ಸಿನೆಮಾದವರೆಲ್ಲಾ ಅದೇ ಮಾಡ್ತಿದ್ರು. ಇದು ಬೇಸರದ ಸಂಗತಿ. " ನನಗೆ ಸಮಯವಿಲ್ಲ, ಹೆಚ್ಚು ಮಾತನಾಡಬೇಡಿ" ಇವೆಲ್ಲಾ ನಿಮ್ಮಂತವರು ಸೆನ್ಸಾರ್ ಮಾಡಿಕೋಬೇಕು ಅಲ್ವೇ?

ಇಂದು ನಮ್ಮ ಜೊತೆ ಸಂಗೀತ ನಿರ್ದೇಶಕ ಹಾಗು ಹಣ ಹೂಡಿದವರು.. J Anoop Seelin ಬಂದಿದ್ರು. ಅವ್ರು ಒಳಗೆ ಬಂದಾಗ ನೀವು ಅವರನ್ನು ಹೊರಗೆ ಕಳಿಸಿದ ರೀತಿ ಮತ್ತೊಂದು ಬೇಸರದ ಸಂಗತಿ. ನಿಮಗೆ ಸಿನೆಮಾಗಳ ಬಗ್ಗೆ ಹೆಚ್ಚು ಗೊತ್ತಿರಲಿಕ್ಕಿಲ್ಲ. ಅವರು  ರಾಜ್ಯ ಪ್ರಶಸ್ತಿ ವಿಜೇತ. ಹಾಗೆ ಕರ್ನಾಟಕದ ಹೆಸರನ್ನು ಬೇರೆ ರಾಜ್ಯಗಳಲ್ಲಿ ಹೆಚ್ಚಿಸುವವರು. ಅವರನ್ನು ಮಾತಾಡಿಸಲು ಜನ ಕಾಯ್ತಿರ್ತಾರೆ. ನೀವು ಸಿನೆಮಾ ಸೆನ್ಸಾರ್ ಮಾಡೋರು, ಸಿನಿಮಾದವರ ಬಗ್ಗೆ ಗೊತ್ತಿರಲಿಕ್ಕಿಲ್ಲ.

ಕೊನೆಯದಾಗಿ, ಬಂದ ನಿರ್ದೇಶಕ ನಿರ್ಮಾಪಕರನ್ನು ಕೂಡಿಸಿ ಮಾತಾಡಿಸುವ ವ್ಯವಿಧಾನ , ನಿಧಾನವಾಗಿ ರೇಗಾಡದೆ ಮಾತಾಡುವ ದೊಡ್ಡತನ ನಿಮ್ಮಿಂದ expect ಮಾಡುತ್ತೇವೆ. ನಿಮ್ಮ ಕೈಲಿ ಅನ್ನಿಸಿಕೊಳ್ಳಲು, ನಮಗೇನು ಖರ್ಮ? ನೀವು ಗವರ್ನ್ಮೆಂಟ್ ನೌಕರ ಅಂತಲೇ? ಹಾಗಿದ್ದರೆ ನಾವು ಗವರ್ನ್ಮೆಂಟು!

ನಿಮಗೆ ಒಂದೂವರೆ ವರ್ಷ ಒಂದು ಸಿನೆಮಾಗೆ ಹಣ ಸಮಯ ಹೂಡಿ ಅನುಭವವಿಲ್ಲ ಬಹುಷಃ. 

ಕಲೆಯನ್ನು ಸೃಷ್ಟಿಸುವ ನಮ್ಮನ್ನು ಅವಮಾನಿಸಿ , ಹೀನಾಯವಾಗಿ ಮಾತಾಡಿಸೋ ಯಾವ ಹಕ್ಕು ನಿಮಗೆ ಅಥವಾ ಯಾರಿಗೂ ಇಲ್ಲ. 

ನಿಮಗೆ ಸಾಕಷ್ಟು ಕೆಲಸಗಳಿರಬಹುದು, ನಾವು ಖಾಲಿ ನಿಮ್ಮೊಂದಿಗೆ ಹರಟೆ ಹೊಡೆಯಲು ಬಂದಿರೋದಿಲ್ಲ. 

ನನ್ನ ಸಿನೆಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಟ್ಟ ನಿಮ್ಮ ಮಾತುಗಳನ್ನು, ನಡವಳಿಕೆಯನ್ನು, ನಾನು , ನನ್ನ ತಂಡದವ್ರು ಸೆನ್ಸಾರ್ ಮಾಡಿ ಕ್ಷಮಿಸಿದ್ದೇವೆ. ಮತ್ತೆ ಹೇಳುತ್ತೇನೆ, ನಿಮ್ಮ ಸರ್ಟಿಫಿಕೇಷನ್ ಬಗ್ಗೆ ನನಗೆ ನೋವಿಲ್ಲ, ನಡೆಸಿಕೊಳ್ಳುವ ರೀತಿ, ಮಾತಾಡಿದ ಬಗೆ.. Non-sense-saar!

Attention - I dont need any publicity for this post or this isnt against the Certificate. Please shower your sympathy on the board. I am absolutely fine with the certificate, but just unhappy with the behaviour."

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery