` ಹೆಲ್ತ್ ಇನ್ಷೂರೆನ್ಸ್.. ಉಪ್ಪಿ ಐಡಿಯಾ ನಿಜಕ್ಕೂ ಸೂಪರ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra's new health idea
Upendra's Lifetime Idea

ನಿಮ್ಮ ಬಳಿ ಹೆಲ್ತ್ ಇನ್ಷೂರೆನ್ಸ್ ಇರುತ್ತೆ. ಆದರೆ, ಆಸ್ಪತ್ರೆಯಲ್ಲಿ ಅದು ಈ ಕಾಯಿಲೆಗೆ ಅಪ್ಲೈ ಆಗಲ್ಲ. ಫುಲ್ ದುಡ್ಡು ಕಟ್ಟಿ ಅಂತಾರೆ. ವೆಹಿಕಲ್ ಇನ್ಷೂರೆನ್ಸ್ ಕೂಡಾ ಅಷ್ಟೆ. ನೀವು ಹಣ ಕಟ್ಟಿರುತ್ತೀರಿ. ಆದರೆ, ಅದು ನಿಮ್ಮ ಗಾಡಿಯಲ್ಲಿ ಯಾವ ಸಮಸ್ಯೆ ಇರುತ್ತೋ.. ಆ ಸಮಸ್ಯೆಗೆ ಮಾತ್ರ ಅಪ್ಲೈ ಆಗಲ್ಲ. ಫುಲ್ ದುಡ್ಡು ಕಟ್ಟಿ ರಿಪೇರಿ ಮಾಡಿಸಬೇಕು. ಲೈಫ್ ಇನ್ಷೂರೆನ್ಸ್ ಇರುತ್ತೆ. ಅಕಾಲ ಸಾವಿಗೀಡಾದಾಗಲೂ ನಮಗೆ ಗೊತ್ತೇ ಇಲ್ಲದ ರೂಲ್ಸ್ ಹೇಳಿ ಯಾಮಾರಿಸುವವರಿಗೇನೂ ಕಡಿಮೆಯಿಲ್ಲ. ಇಂಥಾ ಸಮಸ್ಯೆಗಳಿಗೆಲ್ಲ ಉಪೇಂದ್ರ ಒಂದು ಪರಿಹಾರವನ್ನು ಮುಂದಿಟ್ಟಿದ್ದಾರೆ.

ಒಂದು ದೇಹ, ಒಂದೇ ಜೀವ. ಜೀವನಕ್ಕೆ ಒಂದೇ ಇನ್ಷೂರೆನ್ಸ್. ಇದು ಉಪೇಂದ್ರ ಅವರ ತಲೆಯಲ್ಲಿ ಮೊಳೆತಿರುವ ಐಡಿಯಾ. ಅವರ ಐಡಿಯಾಗಳನ್ನ ಒಂದ್ಸಲ ನೋಡಿ.

ಒಂದೇ ದೇಶ..ಒಂದೇ ಟ್ಯಾಕ್ಸ್ - ಜಿಎಸ್‍ಟಿ

ಒಂದು ದೇಹ, ಒಂದೇ ಇನ್ಷೂರೆನ್ಸ್

ಗಾಡಿಗಳು ಆಕ್ಸಿಡೆಂಟ್ ಆಗಬಹುದು, ಆಗದೇ ಇರಬಹುದು. 

ಗಾಡಿಗಳು ಕಳವಾಗಬಹುದು, ಆಗದೇ ಇರಬಹುದು

ಆದರೂ ಪ್ರತಿ ಗಾಡಿಗೂ ಇನ್ಷೂರೆನ್ಸ್ ಕಡ್ಡಾಯ. 

ಆದರೆ, 

ಪ್ರತಿ ದೇಹಕ್ಕೂ ರೋಗ ತಪ್ಪಿದ್ದಲ್ಲ. ಹಾಗಾದರೆ, ಅಂದ ಮೇಲೆ ಹೆಲ್ತ್ ಇನ್ಷೂರೆನ್ಸ್ ಕಡ್ಡಾಯ ಯಾಕಿಲ್ಲ..? ಈಗಿರುವ ಸುಮಾರು ಇನ್ಷೂರೆನ್ಸ್‍ಗಳು ಕೆಲವು ಕಾಯಿಲೆಗಳನ್ನು ಮಾತ್ರ ಕವರ್ ಮಾಡುತ್ವೆ. ಇನ್ಷೂರೆನ್ಸ್ ಕವರ್ ಆಗುವ ಕಾಯಿಲೆಗಳಷ್ಟೇ ನಮಗೆ ಬರಲ್ಲ. ಹೆಲ್ತ್‍ಗೂ ಒಂದು, ಲೈಫ್‍ಗೂ ಒಂದು, ಆಕ್ಸಿಡೆಂಟ್‍ಗೂ ಒಂದು ಅನ್ನೋ ಬದಲು ಒಂದೇ ಇನ್ಷೂರೆನ್ಸ್. ಒಂದು ದೇಹಕ್ಕೆ ಒಂದೇ ಇನ್ಷೂರೆನ್ಸ್. 

ಐಡಿಯಾ ಏನೋ ಸೂಪರ್ ಆಗಿದೆ. ನೀವು ಹೆಲ್ತ್ ಇನ್ಷೂರೆನ್ಸ್ ಮಾಡಿಸಿದ್ದರೆ, ಯಾವುದೇ ಕಾಯಿಲೆ ಇರಲಿ, ಅದನ್ನು ಇನ್ಷೂರೆನ್ಸ್ ಕವರ್ ಮಾಡುತ್ತೆ ಅನ್ನೋದಾದರೆ, ಪ್ರತಿಯೊಬ್ಬರೂ ಇನ್ಷೂರೆನ್ಸ್ ಮಾಡಿಸ್ತಾರೆ. ಆದರೆ, ಇನ್ಷೂರೆನ್ಸ್ ಕೊಡುವಾಗಲೇ ನೂರಾರು ಕಂಡೀಷನ್ಸ್ ಹಾಕಿದರೆ ಹೇಗೆ..? ಇನ್ಷೂರೆನ್ಸ್‍ನಲ್ಲಿ ಹೇಳಿದ ಕಾಯಿಲೆಗಳಷ್ಟೇ ನಮಗೆ ಬರ್ತವಾ..? ಹಾಗೇನೂ ಇರಲ್ಲವಲ್ಲಾ..? ಉಪೇಂದ್ರ ಅವರ ಈ ಐಡಿಯಾ ಜಾರಿಯಾದರೆ ಹೇಗಿರುತ್ತೆ. ಐಡಿಯಾ ಉಪೇಂದ್ರ ಅವರದ್ದು. ಅಭಿಪ್ರಾಯ ಮೂಡಿಸುವವರು ನೀವೇ. ಪ್ರಜೆಗಳು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery