ಟೈಗರ್ ಪ್ರಭಾಕರ್‍ಗೆ ಕನ್ನಡದಲ್ಲಿ ತಮ್ಮದೇ ಆದ ಸ್ಟೈಲ್, ವರ್ಚಸ್ಸು, ಡೈಲಾಗ್ ಡೆಲಿವರಿ, ಸ್ಟಂಟ್ಸ್ ಮೂಲಕ ಜನಪ್ರಿಯರಾದವರು. ಅವರ ಮಗ ವಿನೋದ್ ಪ್ರಭಾಕರ್ ತೆರೆಯ ಮೇಲೆ ಕಾಣಿಸಿಕೊಂಡಾಗ ಅವರಲ್ಲಿಯೇ ಅಭಿಮಾನಿಗಳು ಟೈಗರ್ ಪ್ರಭಾಕರ್ ಅವರನ್ನು ಕಂಡಿದ್ದು ಅಚ್ಚರಿಯೇನೂ ಆಗಿರಲಿಲ್ಲ. ನಿರೀಕ್ಷಿತವೇ ಆಗಿತ್ತು.
ಆದರೆ, ಪ್ರತಿಯೊಬ್ಬ ಕಲಾವಿದನಿಗೂ ಒಳಗೊಳಗೇ ಇರುವ ತುಡಿತದಂತೆ, ವಿನೋದ್ ಪ್ರಭಾಕರ್‍ಗೂ ಅಂಥಾದ್ದೊಂದು ತುಡಿತವಿತ್ತು. ತಂದೆಯ ಹೆಸರು, ತಂದೆಯ ನೆರಳಿನಿಂದ ಹೊರಬಂದು ತನ್ನದೇ ಆದ ಛಾಪು ಮೂಡಿಸುವ ಬಯಕೆ. ಆದರೆ, ಅದನ್ನು ಏಕಾಏಕಿ ಮಾಡೋಕೆ ಸಾಧ್ಯವಿರಲಿಲ್ಲ. ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಂಡ ವಿನೋದ್ ಪ್ರಭಾಕರ್, ಈಗ ಕ್ರ್ಯಾಕ್ ಚಿತ್ರದಲ್ಲಿ ಆ ಧೈರ್ಯ ಮಾಡಿ ಗೆದ್ದಿದ್ದಾರೆ.
ವಿನೋದ್ ಪ್ರಭಾಕರ್, ಕ್ರ್ಯಾಕ್ ಚಿತ್ರದಲ್ಲಿ ಅಪ್ಪ ಪ್ರಭಾಕರ್ ನೆರಳಿಂದ ಸಂಪೂರ್ಣವಾಗಿ ಹೊರಬಂದು ಮಿಂಚಿದ್ದಾರೆ. ವಿಶೇಷವೆಂದರೆ, ಟೈಗರ್ ಅಭಿಮಾನಿಗಳಿಗೂ ಅದು ಇಷ್ಟವಾಗಿಬಿಟ್ಟಿದೆ. ವಿನೋದ್ ಪ್ರಭಾಕರ್ ಅವರ ಹೊಸ ರೀತಿಯ ಡೈಲಾಗ್ ಡೆಲಿವರಿ, ಸ್ಟೈಲ್, ಫೈಟಿಂಗಿಗೆ ಶಿಳ್ಳೆ, ಚಪ್ಪಾಳೆ ಬಿದ್ದಿವೆ. ವಿನೋದ್ ಪ್ರಭಾಕರ್ ಖುಷಿಯಾಗಿದ್ದಾರೆ.