ಕ್ವೀನ್ ಚಿತ್ರದ ರೀಮೇಕ್ ಬಟರ್ ಫ್ಲೈ ಚಿತ್ರದಲ್ಲಿ ನಟಿಸುತ್ತಿರುವ ಪಾರುಲ್, ಸಿಕ್ಕಾಪಟ್ಟೆ ಜ್ವರದಿಂದ ಬಳಲಿ ಆಸ್ಪತ್ರೆ ಸೇರಿದ್ದಾರೆ. ಮುಂಬೈನಲ್ಲಿ ಮಳೆ ಮತ್ತು ಬಿಸಿಲು ಏಕಕಾಲಕ್ಕೆ ಆಗುತ್ತಿರುವ ಕಾರಣ, ಹವಾಮಾನ ಬದಲಾವಣೆ ಆರೋಗ್ಯದಲ್ಲಿ ಕೈಕೊಟ್ಟಿದೆ.
ಆರೋಗ್ಯ ಸರಿಯಾಗಿದ್ದರೆ, ಪಾರುಲ್ ಈಗ ಗೋಕರ್ಣದಲ್ಲಿರಬೇಕಿತ್ತು. ಇದೇ ತಿಂಗಳು 24ರಂದು ಗೋಕರ್ಣದಲ್ಲಿ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ, ನಾಯಕ ನಟಿಯೇ ಕಾಯಿಲೆ ಬಿದ್ದರೆ ಏನು ಮಾಡೋದು..? ಹೀಗಾಗಿ ನಿರ್ದೇಶಕ ರಮೇಶ್ ಅರವಿಂದ್, ಶೂಟಿಂಗ್‍ನ್ನು ಮುಂದೂಡಿದ್ದಾರೆ.