ಈ ಬಾರಿ ದಸರಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ರಿಳೀಸ್ ಆಗುತ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ತಾರಕ್ ಚಿತ್ರಕ್ಕೆ ಸವಾಲು ಹಾಕುತ್ತಿರುವುದು ಕನ್ನಡದ ಯಾವುದೇ ಸ್ಟಾರ್ ನಟರ ಚಿತ್ರವಲ್ಲ. ಮಹೇಶ್‍ಬಾಬು & ಎ.ಆರ್. ಮುರುಗನ್‍ದಾಸ್ ಕಾಂಬಿನೇಷನ್‍ನ ಸ್ಪೈಡರ್ ಸಿನಿಮಾ.
ದರ್ಶನ್ ಚಿತ್ರ ಸೆಪ್ಟೆಂಬರ್ 29ಕ್ಕೆ ಬಂದರೆ, ಮಹೇಶ್ ಬಾಬು ಚಿತ್ರ ಎರಡು ದಿನ ಮುಂಚೆಯೇ ಬರಲಿದೆ. ಸ್ಪೈಡರ್ ಸಿನಿಮಾ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬರುತ್ತಿರುವ ಚಿತ್ರ. ತಾರಕ್, ಫ್ಯಾಮಿಲಿ ಆಕ್ಷನ್ ಸಿನಿಮಾ. ಹಾಗಂತ ದರ್ಶನ್ ಎದುರಿಸಬೇಕಾದ ಸವಾಲು ಸ್ಪೈಡರ್ ಒಂದೇ ಅಲ್ಲ. ತಾರಕ್ ಬಿಡುಗಡೆಯಾಗುವ ಒಂದು ವಾರ ಮುಂಚೆಯಷ್ಟೇ ಜ್ಯೂ.ಎನ್‍ಟಿಆರ್ ತ್ರಿಪಾತ್ರದಲ್ಲಿ ನಟಿಸಿರುವ ಜೈಲವಕುಶ ರಿಲೀಸ್ ಆಗಿರುತ್ತೆ. ಹೀಗೆ ತೆಲುಗಿನ ಇಬ್ಬರು ಸ್ಟಾರ್‍ಗಳ ಚಿತ್ರದ ಎದುರು ಬರುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.