ಕುರುಕ್ಷೇತ್ರದ ದುರ್ಯೋಧನ ದರ್ಶನ್‍ಗೆ ಕೊನೆಗೂ ಭಾನುಮತಿ ಸಿಕ್ಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರು ಭಾನುಮತಿಯಾಗಿ ನಟಿಸುತ್ತಿರುವುದು ರಮ್ಯಾ ನಂಬೀಸನ್.
ಈ ಮೊದಲು ನಟಿ ರೆಜಿನಾ ಕ್ಯಾಸಂಡ್ರಾ ಭಾನುಮತಿ ಎಂದು ಹೇಳಲಾಗಿತ್ತು. ರೆಜಿನಾ ಕೂಡಾ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಭಾನುಮತಿಯ ಪಾತ್ರಕ್ಕೆ ಇನ್ನೂ ಪಾತ್ರಧಾರಿ ಅಂತಿಮವಾಗಿಲ್ಲ ಎಂದು ದರ್ಶನ್ ಕೂಡಾ ಹೇಳಿದ್ದರು. ಈಗ ಭಾನುಮತಿಯ ಪಾತ್ರಕ್ಕೆ ರಮ್ಯಾ ನಂಬೀಸನ್ ಆಯ್ಕೆಯಾಗಿದ್ದಾರೆ.
ಕುರುಕ್ಷೇತ್ರದಲ್ಲಿ ಕುಂತಿ ಲಕ್ಷ್ಮಿ ಅಲ್ಲ, ಭಾರತಿ..!
ಕುರುಕ್ಷೇತ್ರ ಚಿತ್ರ ಸೆಟ್ಟೇರಿದಾಗಿನಿಂದಲೂ ಯಾವ ಪಾತ್ರಕ್ಕೆ ಯಾರು ಎಂಬ ಕುತೂಹಲ ಪ್ರೇಕ್ಷಕರು, ಅಭಿಮಾನಿಗಳಲ್ಲಿ ನಿರಂತವಾಗಿ ಕಾಡುತ್ತಿದೆ. ಕೆಲವು ಪಾತ್ರಗಳು ಇದ್ದಕ್ಕಿದ್ದಂತೆ ಬದಲಾಗಿವೆ. ಇನ್ನೂ ಕೆಲವು ಪಾತ್ರಗಳನ್ನು ಇವರ ಬದಲಿಗೆ, ಅವರು ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ವೀಕ್ಷಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆಯೇ ಮತ್ತೂ ಹಲವು ಪಾತ್ರಗಳ ಪಾತ್ರಧಾರಿಗಳು ಬದಲಾಗಿದ್ದಾರೆ.
ಭಾನುಮತಿಯ ಜಾಗಕ್ಕೆ ರೆಜಿನಾ ಬದಲು, ರಮ್ಯಾ ಬಂದಂತೆಯೇ, ಕುಂತಿಯಾಗಿ ನಟಿಸಬೇಕಿದ್ದ ಲಕ್ಷ್ಮಿ ಅವರ ಬದಲಿಗೆ ಭಾರತಿ ವಿಷ್ಣುವರ್ಧನ್ ಬಂದಿದ್ದಾರೆ. ಡೇಟ್ ಸಮಸ್ಯೆಯಿಂದಾಗಿ ಲಕ್ಷ್ಮಿ ಕುರುಕ್ಷೇತ್ರ ಚಿತ್ರದಿಂದ ಹೊರನಡೆದಿದ್ದಾರೆ. ಸುಭದ್ರೆಯಾಗಿ ಪವಿತ್ರಾ ಲೋಕೇಶ್ ನಟಿಸುತ್ತಿದ್ದಾರೆ.