ಪೈರಸಿ ಅನ್ನೋದು ಚಿತ್ರರಂಗವನ್ನು ಕಾಡುತ್ತಿರುವ ದೆವ್ವ, ಭೂತ..ಏನಾದರೂ ಹೇಳಿ. ಅದರಿಂದ ಚಿತ್ರರಂಗಕ್ಕೆ ಹೊಡೆತ ಬೀಳುತ್ತಿರುವುದು ಸತ್ಯ. ಆದರೆ, ಈ ಬಾರಿ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದರ ಬಿಸಿ ತಟ್ಟಿರುವುದು ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾಗೆ.
ಧಾರವಾಡದಲ್ಲಿ ಸಂತೋಷ್ ಎಂಬ ಯುವಕ ಥಿಯೇಟರ್ ಹೊಕ್ಕಿದ್ದೇ ತಡ, ಸಿನಿಮಾ ಆರಂಭದಿಂದ ಫೇಸ್ಬುಕ್ ಲೈವ್ ಕೊಡಲು ಶುರುಮಾಡಿಬಿಟ್ಟಿದ್ದಾನೆ. ರಾಜ್ಸಾಗರ್ ಎಂಬ ಯುವಕನೂ ಫೇಸ್ಬುಕ್ನಲ್ಲಿ ಇದೇ ಮಾರ್ಗ ಅನುಸರಿಸಿದ್ದಾನೆ. ಇದು ಸುದ್ದಿಯಾಗುತ್ತಿರುವಾಗಲೇ ಮತ್ತೊಬ್ಬ ಮಾಸ್ಕ್ ಮಂಜು, ದೇವು ನಿಶಾಂತ್ ಗೌಡ ದ್ರುವ ದತ್ತ ಎಂಬ ಯುವಕರು ಫೇಸ್ಬುಕ್ ಲೈವ್ನಲ್ಲಿ ಸಿನಿಮಾ ಪ್ರಸಾರ ಮಾಡಿದ್ಧಾನೆ. ಇಷ್ಟು ದಿನ ಸಿಡಿ, ವೆಬ್ಸೈಟ್ಗಳ ಮೂಲಕ ಪೈರಸಿ ಎದುರಿಸುತ್ತಿದ್ದ ಚಿತ್ರರಂಗಕ್ಕೆ ಇದು ಇನ್ನೊಂದು ದೊಡ್ಡ ಹೊಡೆತ.
ಯಾವ ಫೇಸ್ಬುಕ್ ಮೂಲಕ ಚಿತ್ರವನ್ನು ಪ್ರಚಾರ ಮಾಡುತ್ತಾರೋ..ಅದೇ ಫೇಸ್ಬುಕ್ನ ಲೈವ್ ಟೆಕ್ನಾಲಜಿ ಈಗ ಚಿತ್ರರಂಗವನ್ನೇ ಸುಡಲು ಆರಂಭಿಸಿದೆ. ಇಂದು ಧ್ರುವ ಸರ್ಜಾರ ಭರ್ಜರಿ..ನಾಳೆ ಇನ್ನೊಬ್ಬರದ್ದು..