` ವಿಷ್ಣು ಹುಟ್ಟುಹಬ್ಬಕ್ಕೆ ಆಪ್ತಮಿತ್ರ-2 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
p vasu, vishnuvardhan image
Apthamitra 2 To Launch On Vishnu Birthday

ಇದೇ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಹುಟ್ಟುಹಬ್ಬವಿದೆ. ಆ ಹುಟ್ಟುಹಬ್ಬದ ದಿನ ಆಪ್ತಮಿತ್ರ-2 ಸೆಟ್ಟೇರುತ್ತಿದೆ. ಆ ಚಿತ್ರ ನಿರ್ಮಿಸುತ್ತಿರುವುದು ರಮೇಶ್ ಬಾಬು. ನಿರ್ದೇಶಕ ಒನ್ಸ್ ಎಗೇಯ್ನ್ ಪಿ.ವಾಸು. ಒಟ್ಟಿನಲ್ಲಿ ಬರೋಬ್ಬರಿ 13 ವರ್ಷಗಳ ನಂತರ ಆಪ್ತಮಿತ್ರ-2 ಬರುತ್ತಿದೆ. ಹಾಗೆ ನೋಡಿದರೆ, ವಿಷ್ಣು ಅಭಿನಯದ ಕೊನೆಯ ಚಿತ್ರ ಆಪ್ತರಕ್ಷಕ, ಆಪ್ತಮಿತ್ರ ಚಿತ್ರದ ಮುಂದುವರಿದ ಭಾಗದಂತೆಯೇ ಇತ್ತಾದರೂ, ನಿರ್ಮಾಪಕರು ಬೇರೆಯಾಗಿದ್ದರು. ಆಪ್ತಮಿತ್ರ ಎಂಬ ಹೆಸರು ಬಳಕೆಯಾಗಿರಲಿಲ್ಲ.

ಇಲ್ಲಿಯವರೆಗೆ 21 ಚಿತ್ರ ನಿರ್ಮಿಸಿರುವ ರಮೇಶ್ ಬಾಬು, ವಿಷ್ಣು ಅಭಿಮಾನಿಯೂ ಹೌದು. ಹಾಗೆ ಯೋಚನೆ ಬಂದಿದ್ದೇ ತಡ, ನಿರ್ದೇಶಕರಾಗಿ ಹೊಳೆದ ಹೆಸರೇ ಪಿ.ವಾಸು ಅವರದು. ಅಂದಹಾಗೆ ಇದು ವೊರಿಜಿನಲ್ ಕಥೆಯಲ್ಲ. ಮಲಯಾಳಂನ `ಅರಮನೈ' ಚಿತ್ರವನ್ನು ಆಪ್ತಮಿತ್ರ-2ನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ಇದರಲ್ಲಿ ವಿಷ್ಣುವರ್ಧನ್ ಪಾತ್ರ ತರುವುದು ಹೇಗೆ ಎಂದು ಆಲೋಚಿಸಿದಾಗ, ವಿಷ್ಣು ಅವರನ್ನು ಮೈಸೂರು ದೊರೆ ಅಥವಾ ಸಾಮ್ರಾಟರಾಗಿ ತೋರಿಸುವ ಚಿಂತನೆ ನಡೆದಿದೆ. ಆಪ್ತಮಿತ್ರ-2ನಲ್ಲಿ ಮೂವರು ನಾಯಕಿಯರಿರುತ್ತಾರೆ. ಉಳಿದ ವಿವರಗಳನ್ನೇನಿದ್ದರೂ, ನಿರ್ದೇಶಕ ವಾಸು ಅವರನ್ನೇ ಕೇಳಬೇಕು ಎನ್ನುತ್ತಾರೆ ನಿರ್ಮಾಪಕ ರಮೇಶ್‍ಬಾಬು.

Sagutha Doora Doora Movie Gallery

Popcorn Monkey Tiger Movie Gallery