ಆಕ್ಷನ್ ಪ್ರಿನ್ಸ್ ಅಂದ್ರೆ, ಧ್ರುವ ಸರ್ಜಾ. ಡಿಂಪಲ್ ಕ್ವೀನ್ ಅಂದ್ರೆ ರಚಿತಾ ರಾಮ್. ಈ ಇಬ್ಬರಿಗೂ ಈಗ ಸಿಕ್ಕಾಪಟ್ಟೆ ಲವ್ವಾಗಿಬಿಟ್ಟಿದೆ. ಪುಟ್ಗೌರಿ ಪುಟ್ಗೌರಿ ಅಂತಾ ಧ್ರುವ ರಚಿತಾ ಹಿಂದೆ ಬಿದ್ದಿದ್ದಾರೆ. ರಿಯಲ್ನಲ್ಲಿ ಅಲ್ಲ. ರೀಲ್ನಲ್ಲಿ. ಅದೂ ಭರ್ಜರಿ ರೀಲ್ನಲ್ಲಿ. ಸಿನಿಮಾದ ಆಕ್ಷನ್ ಪ್ರಿನ್ಸ್ಗೂ, ಡಿಂಪಲ್ ಕ್ವೀನ್ಗೂ ಲವ್ವಾಯ್ತು ಅನ್ನೋ ಹಾಡು ಸಿಕ್ಕಾಪಟ್ಟೆ ಹಿಟ್ಟಾಗಿಬಿಟ್ಟಿದೆ.
ಅವರಿಬ್ಬರಿಗೂ ಲವ್ವಾಗಿದ್ದು ಹೇಗೆ ಅನ್ನೋದನ್ನ ನೋಡೋಕೆ ಭರ್ಜರಿ ಸಿನಿಮಾ ನೋಡಬೇಕು. ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಸಿನಿಮಾದಲ್ಲಿರೋದು ಸ್ಟೋರಿ ಅಲ್ಲ, ಲೈಫ್ ಜರ್ನಿ ಅಂತಾರೆ ಧ್ರುವ. ಪ್ರತಿಯೊಬ್ಬರ ಬದುಕಿನಲ್ಲಿ ಚಿಕ್ಕವ ರಿದ್ದಾಗ ಇದ್ದ ಕನಸುಗಳಿಗೂ, ದೊಡ್ಡವರಾಗ್ತಾ ಹೋದಂತೆ ಬದಲಾಗೋ ಕನಸುಗಳಿಗೂ ವ್ಯತ್ಯಾಸಗಳಿರುತ್ವೆ. ಗುರಿಗಳು ಬದಲಾಗುತ್ವೆ.
ಚಿಕ್ಕ ಹುಡುಗನಾಗಿದ್ದಾಗಿನ ಕನಸು, ಕಾಲೇಜಿಗೆ ಹೋಗುವಾಗ ಇರಲ್ಲ. ಚಿತ್ರದ ಹೀರೋ ಧ್ರುವ ಅಂಥವರೇ. ಜಾಕ್ ಆಫ್ ಆಲ್ ಮಾಸ್ಟರ್ ಆಫ್ ನನ್ ಕೆಟಗರಿಯ ಪಾತ್ರ ಧ್ರುವ ಅವರದ್ದು. ಇನ್ನು ರಚಿತಾ ಅವರದ್ದು ಸಿಕ್ಕಾಪಟ್ಟೆ ಮಾತನಾಡುವ ಪಾತ್ರ.
ಸಿನಿಮಾದಲ್ಲಿ ರಚಿತಾ ಮುಖ್ಯ ಹೀರೋಯಿನ್ ಆದರೆ, ಹರಿಪ್ರಿಯಾ ಮತ್ತು ವೈಶಾಲಿ ಕೂಡಾ ನಟಿಸಿದ್ದಾರೆ. ಯಾರೊಬ್ಬರೂ ಕೈಕೊಡಲ್ಲ. ಆದರೂ ಲವ್ವಾಗುತ್ತೆ. ಹೇಗೆ ಅನ್ನೋದು ಅರ್ಥವಾಗಬೇಕು ಅಂದ್ರೆ, ಭರ್ಜರಿಯಾಗಿ ಭರ್ಜರಿ ಸಿನಿಮಾ ನೋಡಬೇಕು. ಅದ್ದೂರಿ, ಬಹದ್ದೂರ್ ನಂತರ ತುಂಬಾ ಗ್ಯಾಪ್ ತೆಗೆದುಕೊಂಡು ಸಿದ್ಧವಾಗಿರುವ ಭರ್ಜರಿ ಈ ಶುಕ್ರವಾರ ಥಿಯೇಟರ್ಗೆ ಬರ್ತಾ ಇದೆ.